Belagavi

ವೀರಭದ್ರೇಶ್ವರ ದೇವಸ್ಥಾನದಲ್ಲಿ ದೀತ್ಸಪೋವ


ಬೈಲಹೊಂಗಲ ೮ – ಕಾರ್ತಿಕೋತ್ಸವ ಅಂಗವಾಗಿ ಇಲ್ಲಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಮುಂಜಾನೆ ವೀರಭದ್ರೇಶ್ವರ ದೇವರಿಗೆ ಅಭಿಷೇಕ ವಿಶೇಷ ಪೂಜೆ ನಡೆಯಿತು ಸಾಯಂಕಾಲ ವೇ, ಮೂ ವಿಶ್ವನಾಥ ಹಾಗೂ ವೇ, ಮೂ ವೀರೇಶ ಸ್ವಾಮಿಗಳ ನೇತೃತ್ವದಲ್ಲಿ ದೇವಸ್ಥಾನದಲ್ಲಿ ದೀಪೋತ್ಸವ ಮಂಗಳಾರತಿ ಪುರವಂತರ ಸೇವೆಯೊಂದಿಗೆ ಪಾಲಕಿ ಉತ್ಸವ ಜರುಗಿದ ನಂತರ ಎಲ್ಲರಿಗೂ ಮಹಾಪ್ರಸಾದ ವಿತರಣೆಯಾಯಿತು.
ದೇವಸ್ಥಾನ ಕಮೀಟಿ ಅಧ್ಯಕ್ಷ ರಾಜೇಂದ್ರ ಸಂಗೊಳ್ಳಿ, ಬಸವರಾಜ ಕೌಜಲಗಿ, ಮಹೇಶ ಬೆಲ್ಲದ, ರಾಜು ಜನ್ಮಟ್ಟಿ , ಅ£Ãಲ ಮೆಟಗುಡ್ದ, ಕುಮಾರ ದೇಶನೂರ, ಅಶೋಕ ಗುಂಡ್ಲೂರ, ಜಗದೀಶ ಲೋಕಪೂರ, ಈರಣ್ಣ ಶೆಟ್ಟರ, ಶಿವಕುಮಾರ ಹಂಪನ್ನವರ, ಈಶ್ವರ ಚಿನಗುಡಿ, ಸೋಮಶೇಖರ ಕೋತಂಬ್ರಿ, ಎಸ್, ಬಿ ವಾಲಿ ಸೇರಿದಂತೆ ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply