Belagavi

ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ: ತಹಸಿಲ್ದಾರ ದುಂಡಪ್ಪ ಕೋಮಾರ್


ಅಥಣಿ: ತಾಲೂಕಿನಲ್ಲಿ ಒಟ್ಟು 45 ವಿಧಾನಪರಿಷತ್ ಚುನಾವಣೆ ಮತಕಟ್ಟೆಗಳಿದ್ದು ಎಲ್ಲಾ ಮತಕಟ್ಟೆಗಳನ್ನು ಪರಿಶೀಲಿಸಿ ಚುನಾವಣೆ ಸಿಬ್ಬಂದಿ ನೇಮಕ ಹಾಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆವೆಂದು ಅಥಣಿ ತೆಹಸೀಲ್ದಾರ್ ದುಂಡಪ್ಪ ಕೋಮಾರ ತಿಳಿಸಿದರು.

ಬುಧವಾರ ಮಾಧ್ಯಮ ಜೋತೆಗೆ ಮಾತನಾಡಿದ ಅವರು ಚುನಾವಣಾ ನೀತಿ ಸಂಹಿತೆ ಡಿ.16 ರವರೆಗೂ ಜಾರಿಯಲ್ಲಿರಲಿದೆ. ಚುನಾವಣೆಗಳಲ್ಲಿ ಇರುವ ನಿಯಮಗಳು ಹಾಗೂ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ’ ಎಂದು ವಿವರಿಸಿದರು.
‘ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸುಗಮ ಚುನಾವಣೆಗೆ ಬೇಕಿರುವ ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದರು.
ಶಿಸ್ತುಬದ್ಧ ಹಾಗೂ ಸುಸೂತ್ರವಾಗಿ ಚುನಾವಣೆ ನಡೆಸಲು ತಾಲ್ಲೂಕು ಮಟ್ಟದಲ್ಲಿ ವಿಚಕ್ಷಣಾ ದಳ ಮತ್ತು ಕಣ್ಗಾವಲು ಸಮಿತಿ ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ಇಡಲು ಸಮಿತಿ ರಚಿಸಲಾಗಿದೆ’ ಎಂದರು.

ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಿಬ್ಬಂದಿ ಹಾಗೂ ಮತದಾರರು ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಸೂಚಿಸಲಾಗಿದೆ.ಈ ಸಂಬಂಧ ಪ್ರಮಾಣ ಪತ್ರವನ್ನು ಸಿಬ್ಬಂದಿ ಪರಿಶೀಲನೆ ನಡೆಸಲಾಗುವುದು ಎಂದರು.


Leave a Reply