Belagavi

ರಾಮತೀರ್ಥ ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ


ಬೆಳಗಾವಿ, : ದಿ೦೮ ರಂದು ರಾಮತೀರ್ಥ ನಗರದ ಶಿವಾಲಯದ ಹತ್ತಿರ ಸ್ಥಳಿಯರ ಬೇಡಿಕೆ ಪ್ರಕಾರ ನೂತನ ಸಮುದಾಯ ಭವನದ ಸ್ಲಾಬ್ ಕೆಲಸಕ್ಕೆ ಶಾಸಕ ಅನಿಲ ಬೆನಕೆ ಹಾಗೂ ಮಂಗಲ ಸುರೇಶ ಅಂಗಡಿ ಅವರಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ ರಾಮತೀರ್ಥ ನಗರದ ರಹವಾಸಿಗಳ ಬಹು ದಿನಗಳ ಬೇಡಿಕೆ ಪ್ರಕಾರ ರಾಮತೀರ್ಥ ನಗರದಲ್ಲಿ ಸಮುದಾಯ ಭವನ ಅವಶ್ಯಕತೆ ಇತ್ತು ಅದರ ಪ್ರಕಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೨೫ ಲಕ್ಷ ಅನುದಾನ ಮಂಜೂರಾತಿ ಮಾಡಿ ಇಂದು ಸ್ಲಾಬ್ ಕೆಲಸಕ್ಕೆ ಚಾಲನೆ ನೀಡಲಾಯಿತು, ಸ್ಥಳಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಸಂಸದರಾದ ಮಂಗಲ ಸುರೇಶ ಅಂಗಡಿ, ನಗರಸೇವಕರಾದ ಹನಮಂತ ಕೊಂಗಾಲಿ, ನ್ಯಾಯವಾದಿಗಳಾದ ಕಿವಡಸನ್ನಾವರ, ಕಣಬರ್ಗಿ ಇಂಡಸ್ಟಿçÃಯಲ ಎರಿಯಾ ಅಧ್ಯಕ್ಷರಾದ ಸುರೇಶ ಯಾದವ ಸೇರಿದಂತೆ ಶಿವಾಲಯ ದೇವಸ್ಥಾನ ಕಮಿಟಿ ಸದಸ್ಯರು ಹಾಗೂ ರಹಿವಾಸಿಗಳು ಉಪಸ್ಥಿತರಿದ್ದರು.


Leave a Reply