Belagavi

ನಕ್ಕು ಸುಸ್ತಾದ ವಾಟ್ಸಾಪ ಜೋಕ್


ನಕ್ಕು ಸುಸ್ತಾದ ವಾಟ್ಸಾಪ ಜೋಕ್
ಬೆಳಗಾವಿ ೧೧- ಇದೇ ದಿ. ೧೧ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಘಟನೆಯವರು ‘ನಕ್ಕು ಸುಸ್ತಾದ ವಾಟ್ಸಾಪ್ ಜೋಕ್’ ಎಂಬ ವಿನೋತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ
ಈ ಕಾರ್ಯಕ್ರಮದಲ್ಲಿ ಯಾರೂ ತಾವು ಮೆಚ್ಚಿಕೊಂಡ ವಾಟ್ಸಾಪ್ ಜೋಕ್‌ನ್ನು ಐದು ನಿಮಿಷದಲ್ಲಿ ಹಂಚಿಕೊಳ್ಳಬಹುದಾಗಿದೆ. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ತವನಪ್ಪ ದೇಸಾಯಿ ವಹಿಸಿಕೊಂಡಿದ್ದಾರೆ. ಅಧ್ಯಕ್ಷತೆಯನ್ನು ಪ್ರೊ. ಎಂ. ಎಸ್. ಇಂಚಲ ವಹಿಸಲಿದ್ದಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು. ಜಿ. ಎಸ್. ಸೋನಾರ, ಅರವಿಂದ ಹುನಗುಂದ ಉಪಸ್ಥಿತರಿರುತ್ತಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಕರ‍್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ಆರ್. ಬಿ. ಕಟ್ಟಿ ಕೇಳಿಕೊಂಡಿದ್ದಾರೆ.


Leave a Reply