Belagavi

ಡಿ.೨೪ ರಂದು ಪಿಂಚಣಿ ಅದಾಲತ್


ಬೆಳಗಾವಿ, ಡಿ.೦೯: ವಿಭಾಗದ ಪಿಂಚಣಿದಾರರಿಗೆ ಪಿಂಚಣಿ ಅದಾಲತ್ ಅನ್ನು ಅಂಚೆ ಅಧೀಕ್ಷಕರ ಕಾರ್ಯಾಲಯ ಬೆಳಗಾವಿಯಲ್ಲಿ ೨೪ ರಂದು ೧೦ ಗಂಟೆಗೆ ನಡೆಸಲಾಗುವುದು
ಡಿಸೆಂಬರ್ ೧೭ ರ ಒಳಗಾಗಿ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಕಳುಹಿಸಬಹುದು.
ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳ ಏನಾದರೂ ಇದ್ದಲ್ಲಿ ಅವುಗಳನ್ನು ಅದಾಲತ್ ನಲ್ಲಿ ಆಲಿಸಲಾಗುವುದು.ನಿವೃತ್ತಿ ಹೊಂದಿದ ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲತ್ ನಲ್ಲಿ ಪಾಲ್ಗೋಳ್ಳಲು ಅವಕಾಶವಿರುವುದಿಲ್ಲ.
ಪಿಂಚಣಿ ಅದಾಲತ್ ನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಬತ್ತೆ ನೀಡಲಾಗುವುದಿಲ್ಲ
ಅದಾಲತ್ ನಲ್ಲಿ ಚರ್ಚಿಸುವ ಅಹವಾಲುಗಳಿದ್ದಲ್ಲಿ, ಅಂಚೆ ಅಧೀಕ್ಷಕರ ಕಾರ್ಯಾಲಯ ಪೋಸ್ಟ್ ಹತ್ತಿರ ಪ್ರಧಾನ ಅಂಚೆ ಕಚೇರಿ ಕಟ್ಟಡ ಬೆಳಗಾವಿ-೫೯೦೦೦೧ ಇವರಿಗೆ ಸಲ್ಲಿಸಬಹುದು ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply