Belagavi

ವಿಶೇಷ ಚೇತನ ಮಕ್ಕಳಿಗೆ ಸಂಪೂರ್ಣ ಸಂಸ್ಥೆಯ ಮೈತ್ರೇಯಿ ಆಮ್ಲಾನ್ ಬಿಸ್ವಾಸ್ ರಿಂದ ನೆರವು


ಬೆಳಗಾವಿ, ಡಿ.೦೯: ಸಂಪೂರ್ಣ ಸಂಸ್ಥೆಯ ಚೆರಮನ್ ಮೈತ್ರೇಯಿ ಆಮ್ಲಾನ್ ಬಿಸ್ವಾಸ್ ಅವರು ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿದರು.
ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿಶೇಷ ಚೇತನ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪಕಿನ್ ಗಳನ್ನು ವಿತರಿಸಿ ಮಾತನಾಡಿದ ಅವರು, ಸುರಕ್ಷಿತ ಮತ್ತು ಸ್ವಚ್ಛ ಮಾಸಿಕ ಋತು ಚಕ್ರ ನಿರ್ವಹಣೆ ಪ್ರತಿ ಹೆಣ್ಣು ಮಗು ಮಹಿಳೆಗೆ ಅವಶ್ಯಕ. ಆದರೆ ಇಂದಿಗೂ ಕೂಡ ಭಾರತದ ಕೆಲವು ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪಕಿನ್ ಗಳನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯವಿಲ್ಲ. ಬದಲಾಗಿ ಅವರು ಬಟ್ಟೆಗಳು,ದಿನಪತ್ರಿಕೆ, ಹುಲ್ಲು ಮೊದಲಾದ ಅನಾರೋಗ್ಯಕರ ವಿಧಾನಗಳನ್ನು ಬಳಸುತ್ತಾರೆ ಮತ್ತು ಸೋಂಕಿಗೆ ಗುರಿಯಾಗುತ್ತಾರೆ.
ಅಂದಾಜಿನ ಪ್ರಕಾರ ದೇಶದ ೭೦ ಪ್ರತಿಶತ ಮಹಿಳೆಯರಿಗೆ ಮಾಸಿಕ ಋತುಚಕ್ರದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸುವದು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯ ನಿವಾರಣೆಗಾಗಿ ಇಂದು ನಾವು ಇಂಥ ಬಾಲಕಿಯರ ನೆರವು ನೀಡುವ ಅವಕಾಶ ದೊರೆತಿರುವದು ನಮಗೆ ಸಂತೋಷದ ವಿಷಯವಾಗಿದೆ ಎಂದು ಸಂಪೂರ್ಣ ಸಂಸ್ಥೆಯ ಚೆರಮನ್ ಮೈತ್ರೇಯಿ ಆಮ್ಲಾನ್ ಬಿಸ್ವಾಸ್ ಅವರು ತಿಳಿಸಿದರು.
ಮಹೇಶ್ವರಿ ಅಂಧ ಮಕ್ಕಳ ಶಾಲೆಯ ೩೦ ವಿಶೇಷ ಚೇತನ ಬಾಲಕಿಯರಿಗೆ ತಲಾ ಎರಡು ಸ್ಯಾನಿಟರಿ ನ್ಯಾಪಕಿನ್ ಗಳನ್ನು ವಿತರಿಸಿದರು ಜೊತೆಗೆ ಮುಂಬೈನ ಕೇಶವಿನ್ಯಾಸ ಸಲೂನ್ ನ ಮಾಲೀಕರಾದ ರಮಣ್ ದೇವಧರ್ ಮತ್ತು ಮುಖ್ಯಸ್ಥರ ಮಾರ್ಗದರ್ಶನದಲ್ಲಿ ರಮಣ್ ಸೌರವ್ ಅವರನ್ನೊಳಗೊಂಡ ತಂಡದ ಮೂಲಕ ೯೦ ವಿಶೇಷ ಚೇತನ ಮಕ್ಕಳಿಗೆ ಉಚಿತವಾಗಿ ಕೂದಲುಗಳನ್ನು ಕತ್ತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿಭಜಂತ್ರಿ, ಸಾಮಾಜಿಕ ಕಾರ್ಯಕರ್ತ ಕಿರಣ್ ನಿಪ್ಪಾಣಿಕರ್ ಆಗಮಿಸಿದ್ದರು. ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಮುಖ್ಯಾಧ್ಯಾಪಕಿ ಅನಿತಾ ಗಾವಡೆ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


Leave a Reply