Koppal

ಭಾವಪೂರ್ಣ ಶ್ರದ್ಧಾಂಜಲಿ


ಕುಷ್ಟಗಿ: ದೇಶದ ಅತ್ಯುನ್ನತ ಸೇನಾ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಬಿಪಿನ್ ರಾವತ್ ಅವರು ದೇಶಕ್ಕಾಗಿ ಬಲಿದಾನ ಮಾಡಿದ ಸಂದರ್ಭದಲ್ಲಿ ಪುಣ್ಯಭೂಮಿ ಭಾರತ ಅವರ ಸೇವೆಯನ್ನು ಮರೆಯದೆ ಸದಾ ಸ್ಮರಣೀಯ ವಾಗಿರುತ್ತದೆ. ಅವರ ಜೊತೆಗೆ ಮಡಿದ ಸರ್ವರಿಗೂ ಚಿರಶಾಂತಿ ಕೋರುತ್ತ ಮತ್ತು ಇಂದು (09 -12 -2021)ರ ನಿಧನರಾದ ನಾಡಿನ ಹಿರಿಯ ಮುತ್ಸದ್ದಿ ಮಾಜಿ ಸಚಿವರಾದ ಶ್ರೀ ಎಸ್ ಆರ್ ಮೊರೆ ಇವರು ಸಚಿವರಾಗಿ,ಸಹಕಾರ, ಗ್ರಾಮೀಣಾಭಿವೃದ್ಧಿ,ರಂಗಗಳಿಗೆ ನೀಡಿದ ಕೊಡುಗೆ ಅಪಾರ. ಹಾಗೂ ಹೆಸರಾಂತ ಪ್ರವಚನಕಾರರಾದ ಶ್ರೀ ಈಶ್ವರ ಮಂಟೂರ ಅವರ ಅಕಾಲಿಕ ನಿಧನದಿಂದ ನಾಡಿನ ವಚನ ಚಿಂತನ ಕ್ಷೇತ್ರ ಹಾಗೂ ಬಸವತತ್ವಕ್ಕೆ ತುಂಬಲಾರದ ನಷ್ಟವಾಗಿದೆ. ಈಶ್ವರ ಮಂಟೂರರು ಶರಣ ಕವಿಗಳು, ಸಾಹಿತಿಗಳು,ವಾಗ್ಮಿಗಳು,ಅಲ್ಲದೇ ಕುಷ್ಟಗಿ ಯಲ್ಲಿ ಶ್ರೀ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿದ್ದರು. ಈ ಮಹಾನ್ ವ್ಯಕ್ತಿಗಳಿಗೆ ದೇವರು ಚಿರಶಾಂತಿ ನೀಡಲೆಂದು ಅವರುಗಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಶೇಖರ್ ಎಸ್ ಗೊರೇಬಾಳ.
ಕುಷ್ಟಗಿ.


Leave a Reply