Koppal

ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲವು ನಿಶ್ಚಿತ – ಮಾಜಿ ಶಾಸಕ ಹಾಗೂ ಭಾಜಪಾ ಕೊಪ್ಪಳ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಚ್ ಪಾಟೀಲ್ ಹೇಳಿಕೆ


ಕುಷ್ಟಗಿ: ಡಿಸೆಂಬರ್ ೧೦ ರಂದು ರಾಯಚೂರು- ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ವಿಶ್ವನಾಥ್ ಬನ್ನಟ್ಟಿ ರವರು ಜಯ ಗಳಿಸುವುದು ನಿಶ್ಚಿತ.

ಈಗಾಗಲೇ ಕೊಪ್ಪಳ ಜಿಲ್ಲೆಯಾದ್ಯಂತ ಮತಯಾಚನೆ ಸಂದರ್ಭದಲ್ಲಿ ನಾವು ಮತದಾರರಲ್ಲಿ ಮನವಿ ಮಾಡಿದ್ದೇವೆ.

ಗ್ರಾಮ ಪಂಚಾಯಿತಿಗೆ ಬರುವ 14ನೆ ಹಣಕಾಸು, ಆಶ್ರಯ ಯೋಜನೆ ಮನೆಗಳು, ನರೇಗಾ ಯೋಜನೆಗಳ ಬಗ್ಗೆ ಹೆಚ್ಚು ಅನುದಾನ ತರುವುದು ಮತ್ತು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಆಸಕ್ತರಿದ್ದಾರೆ ಎಂದರು.

ಸರಳ ಸಜ್ಜನಿಕೆಯ ವ್ಯಕ್ತಿಯಾದ ವಿಶ್ವನಾಥ್ ಬನಹಟ್ಟಿ ರವರನ್ನು ಗೆಲ್ಲಿಸುವುದು ಈಗಾಗಲೇ ಮತದಾರರು ತೀರ್ಮಾನ ಮಾಡಿದ್ದಾರೆ ಹಾಗಾಗಿ ನಮಗೆ ಬರವಸೆ ಇದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವಿಧಾನಪರಿಷತ್ ಸದಸ್ಯರಾಗಿ ವಿಶ್ವ ನಾಥ ಬನಟ್ಟಿ ರವರು ಜಯ ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕರು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರು ಆದ ದೊಡ್ಡನಗೌಡ ಎಚ್ ಪಾಟೀಲ್ ತಿಳಿಸಿದ್ದಾರೆ.

ಈ ಸರಳ ಸಜ್ಜನಿಕೆಯ ಅಭ್ಯರ್ಥಿಗೆ ಮತದಾರರು ಮತ ನೀಡಬೇಕು ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಇವರನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ ಮಹೇಶ್ ವಾಣಿಜ್ಯ ಕೈಗಾರಿಕಾ ನಿಗಮದ ನಿರ್ದೇಶಕರಾದ, ಮುತ್ತು ರಾಠೋಡ್, ಪುರಸಭೆ ಮಾಜಿ ಸದಸ್ಯರಾದ ನಾಗರಾಜ್ ಮೇಲಿನಮನಿ, ಮಾಜಿ ಪಿಎಲ್ ಡಿ ಬಿ ಅಧ್ಯಕ್ಷರಾದ ಶಂಕರಗೌಡ ಪಾಟೀಲ್, ಮುಖಂಡರಾದ ಸಂಗನಗೌಡ ಜೈನ ರ್,ಭಾಜಪ ತಾಲೂಕ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ವಡಿಗೇರಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply