Belagavi

ಬೆಳಗಾವಿ ಪಾಲಿಕೆಯಲ್ಲಿ ಮತ ಚಲಾಯಿಸಿದ ಸದಸ್ಯರು


ಬೆಳಗಾವಿ: ಬಹು ರೋಚಕತೆ ಮೂಡಿಸಿದ ಎಂ.ಎಲ್.ಸಿ ಚುನಾವಣೆ ಮತದಾನ ಪ್ರಕ್ರಿಯೆ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿಯೂ ಮಹಾನಗರ ಪಾಲಿಕೆ ಸದಸ್ಯರು ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಸಂಭ್ರಮಿಸಿದರು.

ಬೆಳಗಾವಿ ವಿಧಾನ ಪರಿಷತ್ತ್ ಚುನಾವಣೆಯು ತ್ರಿಕೋನ ಸ್ಪರ್ಧೆ ಎರ್ಪಡುವುದರ ಮೂಲಕ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದ್ದು ಮಹಾನಗರ ಪಾಲಿಕೆ ಸದಸ್ಯರು ಬೆಳಿಗ್ಗೆ ಪಾಲಿಕೆಗೆ ಆಗಮಿಸಿ ಶಾಂತ ರೀತಿಯಿಂದ ಮತವನ್ನು ಚಲಾಯಿಹಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಿಯ ಶಾಸಕರಾದ ಅನೀಲ್ ಬೆನಕೆ ಮತ್ತು ಅಭಯ ಪಾಟೀಲ್ ಮತ ಚಲಾಯಿಸಿ ಸದಸ್ಯರಿಗೆ ಸಾಥ್ ನೀಡಿದ್ದಾರೆ.

ಬೆಳಗಾವಿಯಿಂದ ಇಬ್ಬರು ಅಭ್ಯರ್ಥಿಗಳು ಎಂ.ಎಲ್.ಸಿ ಗದ್ದೆಗೆ ಹಿಡಿಯಲಿದ್ದು ಡಿ.14ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.


Leave a Reply