Belagavi

ಇಡೀ ರಾಜ್ಯದ ಗಮನ ಸೆಳೆದ ಚುನಾವಣೆಯಲ್ಲಿ ನಮ್ಮದೇ ಆಗಲಿದೆ ರಾಜ್ಯಭಾರ


ಬೆಳಗಾವಿ: ಮತದಾರರು ನಮ್ಮ ಪಕ್ಷದ ಕಡೆ ಹೆಚ್ಚಿನ ೊಲವು ತೋರುತ್ತಿದ್ದು ಬಿಜೆಪಿ ಅಭ್ಯರ್ಥಿಆಯಾಗಿ ಸ್ಪರ್ಧಿಸಿದ ಮಹಾಂತೇಶ ಕವಟಗಿಮಠ ಅವರು ಮೊದಲ ಸುತ್ತಿನಲ್ಲೇ ಜಯಭೇರಿ ಬಾರಿಸಲಿದ್ದಾರೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆಯ ಮತಗಟ್ಟೆ ಸಂಖ್ಯೆ 161ರಲ್ಲಿ ಮತದಾನ ಮಾಡಿದ ಬಳಿಕ ಮಾದ್ಯಮಗಳ ಜೊತೆಗೆ ಅವರು ಮಾತನಾಡಿದರು. ಇಡೀ ರಾಜ್ಯದ ಗಮನ ಸೆಳೆದಿರೋ ಚುನಾವಣೆ. ಇಂದಿನ ವಾತಾವರಣ ನೋಡಿದ್ರೆ  ಮೂರನೇ ಬಾರಿ ಮಹಾಂತೇಶ ಕವಟಗಿಮಠ ಗೆಲ್ಲೋದು ನಿಶ್ಚಿತ. ಮಹಾಂತೇಶ ಕವಟಗಿಮಠ ಹ್ಯಾಟ್ರಿಕ್ ಹಿರೋ ಆಗೋದು ನಿಶ್ಚಿತ. ಬೆಳಗಾವಿ, ಖಾನಾಪುರ ಕ್ಷೇತ್ರದಲ್ಲಿ ವಾತಾವರಣ ಬದಲಾಗಿದೆ. ನಾನು, ಅನಿಲ್ ಬೆನಕೆ ಯಾವತ್ತೂ ಜೊತೆಯಾಗಿರುತ್ತೇವೆ‌. 35 ಬಿಜೆಪಿ ಕಾರ್ಪೊರೇಟರ್ಗಳಷ್ಟೇ ಅಲ್ಲ ಐವರು ಪಕ್ಷೇತರ ಸದಸ್ಯರು ನಮ್ಮ ಪರವಾಗಿದ್ದಾರೆ. 40 ಮತದಾರರು ನಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತ ನೀಡುವ ವಿಚಾರ ನಮ್ಮ ಪಕ್ಷದ ಆದೇಶ ಪಾಲನೆ ಮಾಡಲಿದ್ದಾರೆ ಎಂದರು.


Leave a Reply