Belagavi

ಮಹಾನಗರ ಪಾಲಿಕೆಯಲ್ಲಿ ಮತ ಚಲಾಯಿಸಿದ ಬಿಜೆಪಿ ಪಾಳ್ಯ


ಬೆಳಗಾವಿ: ಜಿದ್ದಾಜಿದ್ದಿನ ಪ್ರತಿಷ್ಠೆಯ ಬೆಳಗಾವಿ ದ್ವಿಸದಸ್ಯ ಸ್ಥಾನಗಳ ವಿಧಾನ  ಪರಿಷತ್ ಚುನಾವಣೆಯ ಮತದಾನ ಮಾಡಲು ಮಹಾನಗರ ಪಾಲಿಕೆಯ ಸದಸ್ಯರು ಶುಕ್ರವಾರ ಬೆಳಗಿನ ಜಾವವೇ ಪಾಲಿಕೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಗೆ ಮತದಾನ ಮಾಡಲು ಏಕಕಾಲಕ್ಕೆ ಎಲ್ಲ ಬಿಜೆಪಿ ಪಾಲಿಕೆ ಸದಸ್ಯ. ಆಗಮಿಸಿ ತಮ್ಮ ಮತವನ್ನು ಚಲಾಯಿಸಿದರು. ಒಟ್ಟಾಗಿ ಬಂದು ಮತದಾನ ಮಾಡಿದ 35 ಬಿಜೆಪಿ ಪಾಲಿಕೆ ಸದಸ್ಯರಿಗೆ ಸ್ಥಳೀಯ ಇಬ್ಬರು ಬಿಜೆಪಿ ಶಾಸಕರು ಹಾಗೂ ಸಂಸದೆ ಮಂಗಳಾ ಅಂಗಡಿ ಸಾಥ್ ನೀಡಿ ಮತದಾನ ಮಾಡಿದರು.

ಶಾಸಕ ಅನಿಲ್ ಬೆನಕೆ ಮಾತನಾಡಿ, ಬೆಳಗಾವಿಯಲ್ಲಿ ಯಾವುದೇ ಚುನಾವಣೆಯಾದರೂ ರಾಜ್ಯದ ಗಮನ ಸೆಳೆಯುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಲೆ ಇದೆ. ಅಲ್ಲದರ,  ಸ್ವತಃ ನಾನೇ ಖಾನಾಪುರದಲ್ಲಿ ಪ್ರಚಾರ ಮಾಡಿದ್ದೇನೆ. ಖಾನಾಪುರ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ವಾತಾವರಣ ಇದೆ. ಮಹಾಂತೇಶ ಕವಟಗಿಮಠ ಪ್ರಥಮ ಪ್ರಾಶಸ್ತ್ಯ ಮತದಿಂದ ಗೆಲವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.


Leave a Reply