Belagavi

ನಮ್ಮ ಮೇಡಂ ಬರಬೇಕು ಕವಟಗಿಮಠ : ಸತೀಶ ಜಾರಕಿಹೊಳಿ


ಬೆಳಗಾವಿ: ಮಹಾನಗರ ಪಾಲಿಕೆಗೆ ಕಚೇರಿ ಆವರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮುಖಾಮುಖಿಯಾದರು.

ಶಾಸಕ ಸತೀಶ ಜಾರಕಿಹೊಳಿ ಮತ ಚಲಾಯಿಸಲು ಪಾಲಿಕೆ ಕಚೇರಿ ಆವರಣದಲ್ಲಿ ನಿಂತಿದ್ದರು.ಇದೇ ವೇಳೆ, ಕವಟಗಿಮಠ‌ ಕುಟುಂಬ ಸಮೇತರಾಗಿ ಆಗಮಿಸಿದರು. ಈ ವೇಳೆ ಪರಸ್ಪರರು ಉಭಯ ಕುಶಲೋಪರಿ ವಿಚಾರಿಸಿದರು.

ಮತ ಚಲಾಯಿಸಿ ಬಂದ್ರಾ ಎಂದು ಕವಟಗಿಮಠ ವಿಚಾರಿಸಿದರು. ಆಗ, ನಮ್ಮ ಮೇಡಂ(ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್) ಬರಬೇಕು ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ಬಳಿಕ ಮತದಾನಕ್ಕಾಗಿ ಕವಟಗಿಮಠ ತೆರಳಿದರು.


Leave a Reply