Koppal

75ನೆಯ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಆಜಾದಿ ಬಚಾವೋ ಶಾಲಾ ಮಕ್ಕಳಿಗೆ, ಶಾಲಾ ಮಕ್ಕಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದರ ಮೂಲಕ ಶಾಲಾಮಕ್ಕಳು ಮಾದರಿ


ಕುಷ್ಟಗಿ:ತಾಲೂಕಿನ ಕೊರಡಕೇರಾ ಗ್ರಾಮದ ಸರಕಾರಿ ಪ್ರೌಢಶಾಲೆ ಮಕ್ಕಳು ಭಾರತ ನಕಾಶೆ ಹಾಗೂ 75ನೇ ನಂಬರಿನ ನಕಾಶದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉಲ್ಲಾಸಭರಿತವಾಗಿ ಪಾಲ್ಗೊಂಡಿರುವುದು ಕಂಡುಬಂತು.

75 ನೇ ಸ್ವಾತಂತ್ರ್ಯ ನಿಮಿತ್ಯ
ಪಧಾನ ಮಂತ್ರಿಗಳಿಗೆ ವಿಜನ್-2047 ಬಗ್ಗೆ ವಿದ್ಯಾರ್ಥಿಗಳು ಭಾರತದ ನಕಾಶೆಯನ್ನು ಮಾಡಿ ಪ್ರಧಾನ ಮಂತ್ರಿಗಳಿಗೆ ಪತ್ರ ಕಳುಹಿಸಿಕೊಟ್ಟರು.

2047ರಲ್ಲಿ ಭಾರತದ ಸ್ಥಿತಿ ಹೇಗಿರಬೇಕು? ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮಲು ಏನೇನು ಕ್ರಮ ಕೈಗೊಳ್ಳಬೇಕು? ಎಂಬ ಬಗ್ಗೆ ಈ ಪುಟಾಣಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಮನಸ್ಸಿನ ಆಲೋಚನೆಗಳನ್ನು ನೇರವಾಗಿ ಪ್ರಧಾನಿಗೇ ತಿಳಿಸಿದ್ದಾರೆ. ಒಂದೆಡೆ ಕುಳಿತು ಅಂಚೆ ಕಾರ್ಡಿನಲ್ಲಿ ತಮ್ಮ ಮನದಾಳದ ಇಂಗಿತವನ್ನು ಬರೆದುಕೊಂಡಿದ್ದಾರೆ.

2047ನೇ ಇಸವಿಯ ವೇಳೆ ಈಗಿದ್ದವರಲ್ಲಿ ಯಾರು ಇರುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ, ಇಂದು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಂದಿನ ನಾಗರಿಕರಾಗಿರುತ್ತಾರೆ. ಅಂದಿನ ಪರಿಸ್ಥಿತಿಗಳನ್ನು ಅವರೇ ನಿಭಾಯಿಸಬೇಕಾಗುತ್ತದೆ. ಹೀಗಾಗಿ, ಅಂದಿನ ಭಾರತಕ್ಕೆ ಇಂದಿನ ಸಿದ್ಧತೆಗಳು, ಮಾರ್ಗ ಹೇಗಿರಬೇಕು ಎಂಬ ಅದ್ಭುತ ಕಲ್ಪನೆಗಳು ಮಕ್ಕಳ ತಲೆಯಿಂದ ನೇರವಾಗಿ ಪ್ರಧಾನಿ ತಲುಪಲಿವೆ.

ಸ್ವಾತಂತ್ರ್ಯ ಸಂಗ್ರಾಮದ ಎಲೆಮರೆಯ ಕಾಯಿಗಳಂತಿದ್ದ ಸ್ವಾತಂತ್ರ್ಯ ಹೋರಾಟಗಾರರ ಸಂಕ್ಷಿಪ್ತ ಜೀವನ ಚರಿತ್ರೆ, ಅಥವಾ ನನ್ನ ದೃಷ್ಟಿಯ 2047ರ ಭಾರತ ಇವುಗಳಲ್ಲಿ ಯಾವುದಾದರೊಂದು ವಿಷಯದ ಕುರಿತು ಅಭಿಪ್ರಾಯವನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಅಂಚೆ ಇಲಾಖೆಯ ಸಹಯೋಗದೊಂದಿಗೆ ಡಿ. 1ರಿಂದ ಈ ಅಭಿಯಾನ ಆರಂಭಗೊಂಡಿದ್ದು, ಡಿ. 20ರ ವರೆಗೆ ಈ ಅಭಿಯಾನ ನಡೆಯುತ್ತಿದೆ.
ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ
ಬರೆದ ಕಾರ್ಡ್‌ಗಳನ್ನು ಎಲ್ಲ ಕಾರ್ಡ್‌ಗಳನ್ನು ದೆಹಲಿಯ ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಲಾಗುತ್ತಿದೆ.
ಭಾರತ ಸಂಸ್ಕೃತಿ ಮತ್ತು ಕಲೆಗೆ ಪ್ರಸಿದ್ಧವಾಗಿದೆ. ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿಗೆ ಸದಾ ಬೆಲೆ ಇದೆ. 2047ರ ಹೊತ್ತಿಗೆ ಭಾರತ ಪ್ರಗತಿ ಹೊಂದಿದ ರಾಷ್ಟ್ರವಾಗಿ ಬದಲಾಗಿದ್ದರೂ, ನಮ್ಮ ಸಂಸ್ಕೃತಿ, ನೆಲೆಗಟ್ಟಿನಲ್ಲಿ, ನಮ್ಮತನ ಉಳಿಸಿಕೊಂಡೇ ಪ್ರಗತಿ ಹೊಂದಬೇಕು ಎಂದು ಕೆಲವು ವಿದ್ಯಾರ್ಥಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೋಗಗಳೇ ಇಂದಿನ ದೊಡ್ಡ ಆತಂಕ. ಮುಂದಿನ 25 ವರ್ಷಗಳಲ್ಲಿ ಭಾರತದ ವೈದ್ಯಕೀಯ ಕ್ಷೇತ್ರ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಬೇಕು. ಈ ಮೂಲಕ ಆತಂಕರಹಿತ, ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕು ಎಂದು ಕೆಲವು ವಿದ್ಯಾರ್ಥಿಗಳು ತಮ್ಮ ಭರವಸೆ ವ್ಯಕ್ತಪಡಿಸಿದ್ದಾರೆ. ದೇಶದ ಅಭಿವೃದ್ಧಿಗೆ ನಾವೇನು ಕೊಡುಗೆ ನೀಡಲಿದ್ದೇವೆ ಎಂದೂ ಕೆಲವು ವಿದ್ಯಾರ್ಥಿಗಳು ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದರು.
ವಿದ್ಯಾರ್ಥಿಗಳ ಹತ್ತು ಹಲವು ಕಲ್ಪನೆಗಳು, ಆಗ್ರಹಗಳನ್ನು ಹೊತ್ತ ಅಂಚೆ ಕಾರ್ಡ್‌ಗಳು ದೆಹಲಿಯತ್ತ ಮುಖ ಮಾಡಿವೆ.

ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಹೊಸತುಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿಯಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಕೊಂಡಗುರಿ
ಮಕ್ಕಳಿಗೆ ಸಂಕ್ಷಿಪ್ತವಾಗಿ ಪತ್ರ ಬರೆಯಲು ಬೋಧನೆ ಮಾಡಿದರು.

74 ವರ್ಷಗಳ ಅವಧಿಯಲ್ಲಿ ದೇಶ ಸಾಧಿಸಿದ ಪ್ರಗತಿ, ಆಡಳಿತ ವ್ಯವಸ್ಥೆಯಲ್ಲಿನ ಸುಧಾರಣೆಗಳು, ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು, ನೀತಿ ನಿರೂಪಣ ಕ್ರಮಗಳನ್ನು ಪ್ರತಿಬಿಂಬಿಸುವುದು ಅದರ ಉದ್ದೇಶವಾಗಿದೆ ಹೀಗಾಗಿ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.

ಕೊರಡಕೇರಾ ಅಂಚೆ ಕಚೇರಿಯ ಶರಣಪ್ಪ ಜವಾರಿಯವರು 210 ಪತ್ರಗಳನ್ನು ಸ್ವತಃ ತಾವೇ ಉಚಿತವಾಗಿ ನೀಡಿ, ಮಕ್ಕಳಿಗೆ ಪ್ರೇರಣೆ ನೀಡಿದ್ದಾರೆ. ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಕೊಂಡಗುರಿ,ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಮೇಶ್ವರ ಡಾಣಿ.ಹಾಗೂ ವಿಜಯಕುಮಾರ್ ಬಿರಾದಾರ ಭಾರತದ ನಕಾಶೆ ವಿದ್ಯಾರ್ಥಿಗಳನ್ನು ನಿಲ್ಲಿಸಿದರು. ಮಲ್ಲಪ್ಪ ಭಂಡಾರಿ, ಶಾಂತೇಶ ಬೆಲ್ಲದ , ಸಲೀಮಾ ಬೇಗಂ, ಪುಷ್ಪಲತಾ, ಹಾಗೂ ಬಿ.ಈಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply