Belagavi

ಜಾನಪದ ತುಂಬ ಶ್ರೇಷ್ಠವಾದ ಸಾಹಿತ್ಯ : ಆಶಾ ಕಡಪಟ್ಟಿ


ಬೆಳಗಾವಿ ೧೦- ಜಾನಪದ ತುಂಬ ಶ್ರೇಷ್ಠವಾದ ಸಾಹಿತ್ಯ. ನವ್ಯ ಕವಿತೆಗಳೂ ಇರಲಿ ಆದರೆ ಜಾನಪದ ಶೈಲಿಯ ಕವಿತೆಗಳನ್ನು ರಚಿಸುವತ್ತ ಹೆಚ್ಚಿನ ಗಮನ ಹರಿಸಲಿ ಎಂದು ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಸದಸ್ಯೆ ಹಿರಿಯ ಕವಯಿತ್ರಿ ಆಶಾ ಕಡಪಟ್ಟಿ ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ದತಿನಿಧಿ ನೀಡಿದವರಿಗೆ ಗೌರವ ಹಾಗೂ ಕವಿಗೋಷ್ಠಿ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕರ‍್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಕಡಪಟ್ಟಿಯವರು ಮೇಲಿನಂತೆ ಅಭಿಪ್ರಾಯ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಹೇಮಾವತಿ ಸೊನೊಳ್ಳಿಯವರು ಮಾತನಾಡಿ, ಶ್ರೀಮಂತರೆಲ್ಲ ಉದಾರ ಮನಸ್ಸಿನವರಿರುತ್ತಾರೆಂಬುದು ಸುಳ್ಳು. ದಾನ ಮಾಡಬೇಕೆಂಬ ಮನಸ್ಸು ಅವರಿಗೆ ಬೇಕು. ಆದ್ದರಿಂದ ದಾನ ಮಾಡುವ ಕೈಗಳು ಯಾವಾಗಲೂ ಶ್ರೇಷ್ಠ. ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆನ್ನುವ ಅವರ ಮನಸ್ಸನ್ನು ನಾವು ಗೌರವಿಸಲೇ ಬೇಕು ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಅಕ್ಕಮಹಾದೇವಿ ಹುಲಗ್ಯಾಳಿ, ಉಮಾ ಅಂಗಡಿ ಮಹಾನಂದ ಪರುಶೆಟ್ಟಿ ಮಮತಾ ಶಂಕರ, ಜಯಶೀಲಾ ಬ್ಯಾಕೋಡ, ಲೀಲಾ ಚೌಗಲೆ, ಅನಿತಾ ಮಾಲಗತ್ತಿ, ಸುಮಾ ಕಿತ್ತೂರ, ಅಕ್ಕಮಹಾದೇವಿ ತೆಗ್ಗಿ, ರೇಣುಕಾ ಜಾಧವ ಮುಂತಾದ ಕವಯಿತ್ರಿಯರು ಕವಿ ಗೋಷ್ಠೀಯಲ್ಲಿ ಕವಿತೆಗಳನ್ನು ವಾಚಿಸಿದರು.
ಡಾ, ಭಾರತಿ ಮಠದ, ಶ್ರೀಮತಿ ರೇಖಾ ಶ್ರೀನಿವಾಸ, ಶ್ರೀಮತಿ ವಾಸಂತಿ ಮೇಳೇದ, ಶ್ರೀಮತಿ ಪ್ರೇಮಾ ಪಾನಶೆಟ್ಟಿ, ಶ್ರೀಮತಿ ಹೀರಾ ಚೌಗಲೆ ದತ್ತಿದಾನಿಗಳನ್ನು ಮಾಲೆ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಜಯಶ್ರೀ ನಿರಾಕಾರಿ ಪ್ರಾರ್ಥಿಸಿದರು. ಇಂದಿರಾ ಮೋಟೆಬೆನ್ನೂರ ಪರಿಚಯಿಸಿದರು. ಶ್ರೀಮತಿ ಜಯಶೀಲಾ ಬಾಕೋಡವಂದಿಸಿದರು.ಶ್ರೀಮತಿ ರಾಜನಂದಾ ಘಾರ್ಗಿ ನಿರೂಪಿಸಿದರು.


Leave a Reply