Belagavi

ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ  ಜಿಲ್ಲೆಯಲ್ಲಿ ಒಟ್ಟು ಶೇ. 99.97 ಮತದಾನ 


ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯ ಹಿನ್ನಲೆ ಶುಕ್ರವಾರ ಡಿ.10 ರಂದು ಜಿಲ್ಲೆಯಲ್ಲಿ ಜರುಗಿದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಶೇ. 99.97 ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ನಿಧಾನಗತಿಯಲ್ಲಿ ಚಲಾವಣೆಯಾದ ಮತದಾನ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಯ ನಂತರ ಚುರುಕಿನಿಂದ ಸಾಗಿತು.
ಜಿಲ್ಲೆಯಲ್ಲಿ ಒಟ್ಟು 8849 ಮತದಾರರು ಇದ್ದು, ಇದರಲ್ಲಿ 8846 ಮತದಾರರು ಮತ ಚಲಾಯಿಸಿದ್ದಾರೆ. ಶೇ.99.97 ರಷ್ಟು ಮತದಾನವಾಗಿದೆ. 4211 ಪುರುಷ ಮತದಾರರ ಪೈಕಿ 4209 ಜನ ಮತ ಚಲಾಯಿಸಿದ್ದಾರೆ ಹಾಗೂ ಒಟ್ಟು 4638 ಮಹಿಳಾ ಮತದಾರರ ಪೈಕಿ 4637 ಮಹಿಳೆಯರು ಮತ ಚಲಾಯಿಸಿದ್ದಾರೆ.
14 ತಾಲೂಕುಗಳ ಪೈಕಿ ನಿಪ್ಪಾಣಿ, ಚಿಕ್ಕೋಡಿ, ಸದಲಗ ಕಾಗವಾಡ ,ರಾಯಬಾಗ, ಹುಕ್ಕೇರಿ ಮೂಡಲಗಿ, ಗೋಕಾಕ, ಖಾನಾಪುರ, ಕಿತ್ತೂರು ,ಬೈಲ ಹೊಂಗಲ ಮತ್ತು ಸವದತ್ತಿಯಲ್ಲಿ ಶೇ 100 ರಷ್ಟು ಮತದಾನವಾಗಿದೆ.
 ಅದೇ ರೀತಿ ಅಥಣಿಯಲ್ಲಿ ಶೇ.99.87 ರಷ್ಟು ಮತದಾನವಾಗಿದ್ದು, ಬೆಳಗಾವಿಯಲ್ಲಿ 99.91 ಹಾಗೂ ರಾಮದುರ್ಗ ದಲ್ಲಿ ಶೇಕಡಾ 99.83 ರಷ್ಟು ಮತದಾನವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇಕಡ 99.97 ರಷ್ಟು ಮತದಾನವಾಗಿದೆ.

Leave a Reply