Koppal

ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಬಿಪಿನ್ ರಾವತ್ ಹಾಗೂ ಹುತಾತ್ಮ ಸೈನಿಕರಿಗೆ ಭಾವ ಪೂರ್ಣ ಗೌರವ ನಮನ


ಕುಷ್ಟಗಿ: ಸಮೀಪದ ಹಿರೇಮನ್ನಾಪೂರ ಇಂದು ಮುಸಂಜೆ ಸಮಯಕ್ಕ ಜೈ ಜವಾನ್..! ಜೈ ಕಿಸಾನ್…! ಎನ್ನುವ ವಾಕ್ಯದೊಂದಿಗೆ
ಇತ್ತೀಚಿಗೆ ತಮಿಳುನಾಡಿನ ನೀಲಗಿರಿಯಲ್ಲಿ ಸೇನಾ ತರಬೇತಿ ಶಿಬಿರದ ಉಪನ್ಯಾಸಕ್ಕೆಂದು ತೆರಳುತ್ತಿದ್ದ, ಭಾರತೀಯ ಸೇನಾ ಪಡೆಗಳ ಪ್ರಥಮ ಮುಖ್ಯಸ್ಥ ಶ್ರೀ ಬಿಪಿನ್ ರಾವತ್ ಹಾಗೂ ಧರ್ಮಪತ್ನಿ ಶ್ರೀಮತಿ ಮಧುಲಿಕಾ ರಾವತ್ ಸೇರಿದಂತೆ ಹೆಲಿಕಾಪ್ಟರ್ ಸೇನಾ ಸಿಬ್ಬಂದಿ 12 ಸೈನಿಕರು ಹೆಲಿಕಾಪ್ಟರ್ ದುರಂತದಲ್ಲಿ ಜೀವಂತ ದಹನವಾಗುವ ಮೂಲಕ ಪ್ರಾಣತ್ಯಾಗ ಮಾಡಿ, ಹುತಾತ್ಮರಾದ ಸೇನೆಯ ಮುಖ್ಯಸ್ಥರು ಹಾಗೂ ಸೈನಿಕರಿಗೆ ಹೈದರಾಬಾದ್_ಕರ್ನಾಟಕ_ಯುವಶಕ್ತಿ ಗ್ರಾಮ ಘಟಕ ಹಿರೇಮನ್ನಾಪೂರ, ನಮಸ್ತ ಗ್ರಾಮದ ಹಿರಿಯರು ಗ್ರಾಮ ಪಂಚಾಯತ ಸರ್ವ ಸದಸ್ಯರು ಸೇರಿದಂತೆ ಕುಷ್ಟಗಿ ತಾಲೂಕು ಮಾಜಿ ಸೈನಿಕರ ಸಂಘದ ಜೊತೆಗೂಡಿ, ಭಾವಪೂರ್ಣ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಶ್ರೀ ಗವಿ ಸಿದ್ದೇಶ್ವರ ಪ್ರೌಡ ಶಾಲೆಯಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ರವರ ಭಾವಚಿತ್ರಕ್ಕೆ ಮಾಜಿ ಸೈನಿಕ ಅಶೋಕ ಪಾಟೀಲ್, ಮಾಲಾರ್ಪಣೆ ಮಾಡಿ,ಗೌರವ ನಮನ ಸಲ್ಲಿಸಿದರು. ನಂತರ (ಕ್ಯಾಂಡಲ್ ಮಾರ್ಚ್) ಮೇಣದಬತ್ತಿ ಬೆಳಗುವ ನಡಿಗೆಗೆ, ಗ್ರಾಮ ಪಂಚಾಯತ ಅಧ್ಯಕ್ಷರು ಹನಮಂತಪ್ಪ ಅಳ್ಳಳ್ಳಿ, ಮತ್ತು ಸರ್ವಸದಸ್ಯರು ಮೇಣದಬತ್ತಿ ಹೊತ್ತಿಸುವ ಮೂಲಕ ಚಾಲನೆ ನೀಡಿದರು.

ರಾಷ್ಟ್ರಾಭಿಮಾನ, ಭಾರತೀಯ ಸೇನಾಪಡೆಗಳಿಗೆ ಗೌರವ ಹಾಗೂ ಆತ್ಮಸ್ಥೈರ್ಯ ತುಂಬುವ ಘೋಷವಾಕ್ಯಗಳೊಂದಿಗೆ ಹಿರೇಮನ್ನಾಪೂರ ಬಸ್ಸ್ ನಿಲ್ದಾಣ ವೃತ್ತದ ವರೆಗೆ ಮೇಣದಬತ್ತಿ ಬೆಳಗಿಸಿಕೊಂಡು ಸಾಗಲಾಯಿತು.
ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ಬಸವರಾಜ್ ಗಾಣಿಗೇರ ಮಾತನಾಡಿ, ಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ರವರ ಧೈರ್ಯ-ಶೌರ್ಯ ಹಾಗೂ ತಮ್ಮ ಬದುಕನ್ನು ಕುಟುಂಬ ಸಮೇತರಾಗಿ ನಿರಂತರ ದೇಶದ ಸೇನಾಪಡೆಯ ಪ್ರಬಲಗೊಳಿಸಲು ಮೀಸಲಿಟ್ಟಿರುವ ದೇಶಪ್ರೇಮವನ್ನು ಕೊಂಡಾಡಿದರು. 2019ರಲ್ಲಿಯೇ ಸೇನೆಯ ಸೇವಾ ನಿವೃತ್ತಿ ಹೊಂದಬೇಕಾಗಿದ್ದ ರಾವತ್ ರು, ಭಾರತ ಸರ್ಕಾರ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಸೇನಾಪಡೆಗಳ ಉನ್ನತ ಸ್ಥಾನಕ್ಕೆ ಏರಿದವರು’ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಮಧುಲಿಕಾ ರಾವತ್ ಸೇರಿದಂತೆ ಇನ್ನುಳಿದ ಸೇನಾಪಡೆಯ ಹನ್ನೆರಡು ಪ್ರಮುಖ ಸೈನಿಕರ ಹೆಸರುಗಳನ್ನು ಸ್ಮರಿಸಿ, ಗೌರವ ನಮನ ಸಲ್ಲಿಸಲಾಯಿತು.

ನಂತರ ಶಿವಾನಂದ ಹಿರೇಮಠ ಹಾಗೂ ಮಾಜಿ ಸೈನಿಕ ಅಶೋಕ ಪಾಟೀಲ್ ಹುತಾತ್ಮ ಯೋಧರಿಗೆ ನುಡಿನಮನ ಸಲ್ಲಿಸಿ,ಮಡಿದ ಯೋಧರ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.
ಎರಡು ನಿಮಿಷದ ಮೌನಾಚರಣೆ ಮೂಲಕ ಹುತಾತ್ಮ ವೀರಯೋಧರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಪ್ರಾರ್ಥಿಸಲಾಯಿತು.

ಹೈ-ಕ ಯುವಶಕ್ತಿ ಸಂಘಟನೆಯ ಹನಮೇಶ ಪಲ್ಲೇದ,ಕಿರಣ್ ಜ್ಯೋತಿ, ಬಸವರಾಜ ತಿಮ್ಮಾಪೂರ, ರಾಮಣ್ಣ ಭಜಂತ್ರಿ,ಮಂಜುನಾಥ ತಳವಗೇರಾ, ಹಿರೇಮನ್ನಾಪುರ ಗ್ರಾಮ ಘಟಕದ ಅಧ್ಯಕ್ಷರು ಮಂಜುನಾಥ ಕಜ್ಜಿ , ಸರ್ವ ಪದಾಧಿಕಾರಿಗಳು ಹಾಗೂ ಗ್ರಾಮದ ಗುರು ಹಿರಿಯರು ಇತರರು. ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply