Belagavi

ಸುವರ್ಣ ಸೌಧ ಕದನಕ್ಕೆ ಕ್ಷಣಗಣನೆ, ಸುತ್ತಲೂ ಬಿಗಿ ಬಂದೂಬಸ್ತ ಕೋವಿಡ್ ಗೆ “ನೋ ಎಂಟ್ರಿ”


ಬೆಳಗಾವಿಯು ಚಳಿಗಾಲ ಅಧಿವೇಶನಕ್ಕೆ ಸುಂದರಿಯಂತೆ ಸಜ್ಜಾಗಿ ನಿಂತಿದ್ದು ಇಂದಿನಿಂದ  ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ವಿಧಾನ ಮಂಡಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಅಧಿವೇಶನದ ಹಿನ್ನೆಲೆ ಎಲ್ಲ ಮಂತ್ರಿ ಮಂಡಲ ಮತ್ತು ಅಧಿಕಾರಿಗಳ ವರ್ಗ ಸೌಧದತ್ತ ಮುಖ ಮಾಡಿದ್ದು ಈ ಬಾರಿಯ ಅಧಿವೇಶನ ಭಾರಿ ನಿರೀಕ್ಷೆಗಳನ್ನು ಹೊಂದಿದೆ.

ಪೊಲೀಸರು ಈಗಾಗಲೇ ಸುವರ್ಣ ಸೌಧದ ನಾಲ್ಕು ದ್ವಾರಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಸುತ್ತಿದ್ದು, ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಸುವರ್ಣ ಸೌಧ ಒಳಗೆ ಪ್ರವೇಶಕ್ಕೆ ಅನುಮತಿಸಲಾಗುತ್ತಿದೆ.

ತಪಾಸಣೆ ಬಿಗಿಗೊಳಿಸಿರುವ ಪೊಲೀಸರು, ಸುವರ್ಣ ಸೌಧ ಪ್ರವೇಶಿಸೋ ಪ್ರತಿಯೊಬ್ಬರನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಹಾಗೂ ಕೊರೋನಾ 2 ಡೋಸ್ ಲಸಿಕೆ ಇಲ್ಲವೇ ನೆಗೆಟಿವ್ ವರದಿಯನ್ನು ತೋರಿಸಿದ್ರೇ ಮಾತ್ರ ಸುವರ್ಣ ಸೌಧ ಪ್ರವೇಶಿಸುವದಕ್ಕೆ ಅವಕಾಶ ನೀಡುತ್ತಿದ್ದಾರೆ.

 

 


Leave a Reply