Koppal

ವಿಜೃಂಬಣೆಯಿಂದ ಆರಾಳ ಗ್ರಾಮದಲ್ಲಿ ಶ್ರೀ ಕನಕದಾಸ ಜಯಂತ್ಯುತ್ಸವ


ಗಂಗಾವತಿ:ಡೊಳ್ಳು ಬಾರಿಸುವುದರ ಮೂಲಕ ಶಾಸಕ ಪರಣ್ಣ ಮುನವಳ್ಳಿ ಮೆರವಣಿಗೆಗೆ ಚಾಲನೆ ನೀಡಿದರು.

ಭಕ್ತಿ ಮಾರ್ಗಕ್ಕೆ ಹಾಗೂ ದೈವತ್ವಕ್ಕೆ ಯಾವುದೇ ಜಾತಿ ಮತ ಪಂಥ ಕಾಣಿಸದು ಎಂಬುದಕ್ಕೆ ದಾಸ ಶ್ರೇಷ್ಠ ಕನಕದಾಸರು ಪ್ರಮುಖರಾಗಿದ್ದಾರೆ ಎಂದು ಶಾಸಕ ಪರಣ್ಣ ಮನವಳ್ಳಿ ಹೇಳಿದರು ಅವರು ರವಿವಾರದಂದು ಸಮೀಪದ ಆರಾಳ ಗ್ರಾಮದಲ್ಲಿ ಶ್ರೀ ಕನಕದಾಸ ಜಯಂತೋತ್ಸವ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ ಕನಕದಾಸರು ಶ್ರದ್ಧೆ-ಭಕ್ತಿಯಿಂದ ಶ್ರೀಕೃಷ್ಣ ದೇವರನ್ನು ಪೂಜಿಸುತ್ತಾ ಅವರಲ್ಲಿನ ನಿಷ್ಠೆಯನ್ನು ಕಂಡು ಸಾಕ್ಷಾತ್ ಶ್ರೀಕೃಷ್ಣ ಕನಕದಾಸರಿಗೆ ಪ್ರತ್ಯಕ್ಷಂ ಆಗಿರುವುದಕ್ಕೆ ಉಡುಪಿಯ ಕನಕನ ಕಿಂಡಿ ಸಾಕ್ಷಿಯಾಗಿದೆ ಅಂತಹ ಮಹತ್ವವಾದ ಭಕ್ತಿ ಶ್ರೀಕನಕದಾಸರು ಹೊಂದಿದ್ದರು ದಾಸ ಪರಂಪರೆ ಇತಿಹಾಸದಲ್ಲಿ ದಾಸರು ಯಾವುದೇ ಒಂದು ನಿರ್ದಿಷ್ಟ ಕೋಮಿಗೆ ಒಳಪಡದೆ ಸರ್ವಜನಾಂಗದ ಹಿತ ಹಾಗೂ ಸಮಾನತೆಯನ್ನು ಬಯಸುವವರು ಹೀಗಾಗಿ ಅವರ ಕೀರ್ತನೆಗಳಲ್ಲಿ ಕುಲ ಕುಲ ಕುಲವೆಂದು ಹೊಡೆದಾ ಡುವಿರಿ ನೀವು ಕುಲದ ನೆಲೆಯನ್ನು ಬಲ್ಲಿರಾ ಬಲ್ಲಿರಾ ಎಂಬ ಅವರ ಸಂದೇಶ 12ನೇ ಶತಮಾನದಲ್ಲಿ ಕಾಣಬಹುದಾಗಿದೆ ಹೀಗಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಧಾರ್ಮಿಕತೆ ಗುಣಮಟ್ಟದ ಸಂಸ್ಕಾರ ಜೀವನದ ಮೌಲ್ಯಗಳನ್ನು ತಿಳಿಸಿಹೇಳುವ ಕಾರ್ಯ ಪಾಲಕರು ಮುಂದಾಗಬೇಕು ಅಂದಾಗ ಮಾತ್ರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು, ಇದಕ್ಕೂ ಮುಂಚೆ ಡೊಳ್ಳು ಸಕಲ ವಾದ್ಯಗಳೊಂದಿಗೆ ಶಾಸಕರು ಹಾಗೂ ಗಣ್ಯರಿಗೆ ಕಂಬಳಿಯನ್ನು ಹೊದಿಸುವುದು ಮೂಲಕ ಸ್ವಾಗತಿಸಿ ಕೊಳ್ಳಲಾಯಿತು ಕನಕದಾಸರ ಭಾವಚಿತ್ರದ ಪೂಜೆಯನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಸಣ್ಣಕ್ಕಿ ನೀಲಪ್ಪ ವಿಠಲಾಪುರ ಯಮುನಪ್ಪ ರುದ್ರೇಶ ರುದ್ರೇಶ ಸೇರಿದಂತೆ ಹಾಲುಮತ ಸಮಾಜದವರು ಮಹಿಳೆಯರು ಯುವಕರು ಪಾಲ್ಗೊಂಡಿದ್ದರು

ಗಂಗಾವತಿ
(ಹನುಮೇಶ್ ಬಟಾರಿ)


Leave a Reply