Koppal

ಶ್ರೀ ಜಗನಾಥ ದಾಸರ ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿದ ಗಂಗಾವತಿ ಪತ್ರಕರ್ತರು ಹಾಗೂ ನ್ಯಾಯವಾದಿಗಳು


ಗಂಗಾವತಿ: ಸಮಾಜಕ್ಕೆ ದಾಸ ವರ್ಯರ ಕೊಡುಗೆ ಅನನ್ಯ,
ಸಮಾಜದಲ್ಲಿನ ಅಜ್ಞಾನ ಅಂಧಕಾರ, ಮೌಡ್ಯತೆ, ಅಸಮಾನತೆ ತೊಲಗಿಸುವಲ್ಲಿ ಹರಿದಾಸರ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಹೇಳಿದರು ಅವರು ಶುಕ್ರವಾರದಂದು ನಗರದ ಕನಕದುರ್ಗ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಶ್ರೀ ಜಗನ್ನಾಥದಾಸರು ಕನ್ನಡ ಚಲನಚಿತ್ರವನ್ನು ಸಿನಿಮಾ ಆರಂಭಕ್ಕೆ ಮುಂಚೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು, ಕ್ರಿಸ್ತಶಕ 12 ಮತ್ತು 13ನೇ ಶತಮಾನದ ಮಧ್ಯದಲ್ಲಿ ವಚನಕಾರರು ಸೇರಿದಂತೆ ಹರಿದಾಸ ಪುಂಗವ ರು, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಭಕ್ತಿ ಮಾರ್ಗಕ್ಕೆ ವಿಶೇಷ ಕೊಡುಗೆಯನ್ನು ನೀಡಿದವರು ಕನಕದಾಸರು ಪುರಂದರದಾಸರು ವಿಜಯ ವಿಠ್ಠಲ ದಾಸರು ಸೇರಿದಂತೆ ಶ್ರೀ ಜಗನ್ನಾಥ ದಾಸರು ತಮ್ಮ ಉಪಭೋಗ ಸುಳಾದಿ ಭಕ್ತಿ ಕೀರ್ತನೆಗಳಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಲ್ಲಿ ಅತ್ಯಂತ ದೈವೀಪುರುಷ ರಾಗಿ ಕಂಗೊಳಿಸುತ್ತಾರೆ,, ಅಂತಹ ಮಹಾನ್ ದಾಸರ ಜೀವನ ನಡೆದುಬಂದ ದಾರಿ ಮೋಕ್ಷ ಸಾಧನೆಗೆ ಭಕ್ತಿಮಾರ್ಗ ಅತ್ಯಂತ ಮುಖ್ಯ ಎಂದು ಸಾರಿದ ಮಹಾನ್ ಸಾಧಕರು ಅಂತಹ ದೈವೀ ಪುರುಷ ರ ಕನ್ನಡ ಚಿತ್ರ ಸುಮಾರು ಹಲವು ದಶಕಗಳಿಂದ ತೆರೆಕಂಡಿತ್ತು ಯಾವುದೇ ಜಾತಿ ಮತ ಪಂಥ ಬೇದಬಾವ ತೊರೆದು ಕುಟುಂಬ ಸಮೇತವಾಗಿ ನೋಡಬೇಕಾದ ಚಿತ್ರ ಇದಾಗಿದೆ ಎಂದು ತಿಳಿಸಿದರು, ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿದರು ಸ್ಥಳೀಯ ಕಲಾವಿದರಾದ ಪತ್ರಕರ್ತ ರಾಮಮೂರ್ತಿ ನವಲಿ ನಾಗರಾಜ್ ಇಂಗಳಗಿ , ನ್ಯಾಯವಾದಿ ಶರತ್ ದಂಡಿನ್ ಹರೀಶ್ ಕುಲಕರ್ಣಿ ವಿಷ್ಣುತೀರ್ಥ ಜೋಶಿ ಸೇರಿದಂತೆ ಮತ್ತಿತರ ಕಲಾವಿದರು ಚಿತ್ರದಲ್ಲಿ ನಟಿಸಿರುವುದು ಗಂಗಾವತಿ ಕಲೆ ಸಾಹಿತ್ಯ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ
ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಮಾಜಿ ಎಮ್.ಎಲ್.ಸಿ.ಹೆಚ್.ಶ್ರೀನಾಥ್ ಹಾಸ್ಯ ದಿಗ್ಗಜರಾದ ಬಿ.ಪ್ರಾಣೇಶ
ರಾಜವಂಶಸ್ಥ ಶ್ರೀಮತಿ ಲಲಿತಾರಾಣಿ ರಾಯಲು ಚಿತ್ರ ಕಲಾವಿದ ಹಾಗೂ ಪತ್ರಕರ್ತ ರಾಮಮೂರ್ತಿ ನವಲಿ ನ್ಯಾಯ ವಾದಿ ಶರತ್ ದಂಡಿನ್ ನಾಗರಾಜ್ ಇಂಗಳಗಿ ವಿಷ್ಣುತೀರ್ಥ ಜೋಶಿ ಆದಾಪುರ ಸೇರಿದಂತೆ ಮತ್ತಿತರರು ಇದ್ದರು

ಗಂಗಾವತಿ
( ಹನಮೇಶ ಬಟಾರಿ)


Leave a Reply