Koppal

10ನೇ ತರಗತಿಯ ಮ್ಯಾಥ್ ಐಕಾನ್ ಟೆಸ್ಟ್ ನಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 5 ಸಾವಿರ. ರವಿ ಚೈತನ್ಯ ರೆಡ್ಡಿ


ಗಂಗಾವತಿ:ಭಾರತೀಯ ವಿಖ್ಯಾತಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ಹುಟ್ಟು ಹಬ್ಬ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಡಿ.19ರಂದು ಮ್ಯಾಥ್ ಐಕಾನ್ ಟೆಸ್ಟ್ (ಮಾದರಿ ಗಣಿತ ಪರೀಕ್ಷೆ) ಹಮ್ಮಿಕೊಳ್ಳಲಾಗಿದೆ. ಗಂಗಾವತಿ ನಗರದ ವೆಂಕಟೇಶ್ವರ ಪಿಯು ಕಾಲೇಜಿನ ಅಧ್ಯಕ್ಷ ರವಿಚೈತನ್ಯ ರೆಡ್ಡಿ ಹೇಳಿದ್ದಾರೆ.

ಪತ್ರಿಕೆ ಹಾಗೂ ಮಾಧ್ಯಮದೊಂದಿಗೆ ಮಾತನಾಡಿದ ಅವರು, State syllabus, CBSE, ICSE, ಹತ್ತನೇ ತರಗತಿ ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸಿ ಅವರಲ್ಲಿ ಆಸಕ್ತಿ ಮೂಡಿಸುವ ಉದ್ದೇಶಕ್ಕೆ ಕೊಪ್ಪಳ ರಸ್ತೆಯಲ್ಲಿರುವ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ ಮ್ಯಾಥ್ ಐಕಾನ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪರೀಕ್ಷೆ ಕೇವಲ ಹತ್ತನೇ ವಿದ್ಯಾರ್ಥಿಗಳಿಗೆ ಮಾತ್ರ, ಈ ಸಾಲಿನಲ್ಲಿ ಇರುವ ಶೈಕ್ಷಣಿಕ ಪಠ್ಯ ಆಧಾರಿಸಿ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.ಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಜಿಲ್ಲೆಯಲ್ಲಿ ಇರುವ ಯಾವುದೇ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದು.
ಮ್ಯಾಥ್ ಐಕಾನ್ ಟೆಸ್ಟ್‌ನಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ 5000/₹ ನಗದು ನೀಡಲಾಗುವುದು. ವಿಶೇಷವಾಗಿ ಎರಡರಿಂದ ಹತ್ತನೇ ಸ್ಥಾನ ಪಡೆಯುವ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಎಕ್ಸಲೆಂಟ್ ಗಣಿತ ಪುಸ್ತಕಗಳನು ನೀಡಲಾಗುವುದು.

ಡಿ.19ರಂದು ಬೆಳಗ್ಗೆ 10ರಿಂದ 11ರವರೆಗೆ ಮೊದಲ ಬ್ಯಾಚ್ ಮತ್ತು 11.30 ರಿಂದ 12.30ರವರೆಗೆ ಎರಡನೇ ಬ್ಯಾಚ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲಾಗುವುದು. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮೊ:9663077794 ಅಥವಾ 08533-270438 ಸಂಪರ್ಕಿಸುವಂತೆ ರವಿಚೈತನ್ಯ ರೆಡ್ಡಿ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

ಗಂಗಾವತಿ ವರದಿಗಾರ
(ಹನಮೇಶ ಬಟಾರಿ)


Leave a Reply