Koppal

ಕಾಶಿ ಭವ್ಯ ಪರಂಪರೆಯನ್ನು ಪುನಶ್ಚೇತನಗೊಳಿಸಿದ ಪ್ರಧಾನಿಗೆ ನಮೋನ್ನಮಃ, ಸಾಗರ ಮುನವಳ್ಳಿ


ಗಂಗಾವತಿ: ಭವ್ಯ ಕಾಶಿ ದಿವ್ಯ ರಾಶಿ ಶ್ರೀ ಚನ್ನಬಸವ ಸ್ವಾಮಿಗೆ ವಿಶೇಷ ಪೂಜೆ, ಭಾರತ ಭವ್ಯ ಪರಂಪರೆ ಭವ್ಯ ಚರಿತ್ರೆ ಇತಿಹಾಸ ಐತಿಹಾಸಿಕ ಹೊಂದಿದ ಪವಿತ್ರ ದೇಶ ಅಂತಹ ದೇಶದ ವಾರಣಾಶಿಯ ಕಾಶಿ ಎನ್ನು, ಕಾರಿಡಾರ್ ಮೂಲಕ ಇತಿಹಾಸವನ್ನು ಮರುಕಳಿಸಲು ಮುಂದಾದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಕೃಷ್ಟ ಸಂಚಾಲಕ ಸಾಗರ್ ಮುನವಳ್ಳಿ ಅಭಿಪ್ರಾಯಪಟ್ಟರು ಅವರು ಸೋಮವಾರದಂದು ಕಾರಿಡಾರ ಲೋಕಾರ್ಪಣೆ ಪ್ರಯುಕ್ತ ಭವ್ಯ ಕಾಶಿ ದಿವ್ಯ ರಾಶಿ ಎಂಬ ಶೀರ್ಷಿಕೆಯ ಅಡಿಯಲ್ಲಿನಗರದ ಶ್ರೀ ಚನ್ನಬಸವ ಸ್ವಾಮೀಜಿ ರವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವೆನಿಸಿದ್ದ ವಾರಣಾಶಿಯ ಕಾಶಿ ಪಟ್ಟಣವು,ಅಲ್ಲಿನ ಪಂಡಿತರು ಸೇರಿದಂತೆ ಜನತೆಗೆ ಹಲವು ಸಂಕಷ್ಟಗಳನ್ನು ಎದುರಾಗಿದ್ದವು.

ಅಂತಹ ಕಾಶಿಯನ್ನು ಪುನಶ್ಚೇತನಗೊಳಿಸುವುದು ಮೂಲಕ ನಾಲ್ಕು ದಿಕ್ಕುಗಳ ಮೂಲಕ ಭಕ್ತಾದಿಗಳು ವಿಶ್ವನಾಥನ ದರ್ಶನ ಪಡೆಯಲು ಅನುಕೂಲವಾಗುವಂತೆ ಕಾರಿಡಾರ್ ನಿರ್ಮಾಣ ಗೊಳಿಸಿ ಲೋಕಾರ್ಪಣೆ ಗೊಳಿಸುತ್ತಿರುವುದು ದೇಶದ ಪ್ರತಿಯೊಬ್ಬ ಆಸ್ತಿಕ ಬಂಧುಗಳಿಗೆ ಸಂತೋಷದಾಯಕವಾಗಿದೆ, ಸನಾತನ ಧರ್ಮದ ರಕ್ಷಣೆಯ ಜೊತೆಗೆ ಸಾಮಾಜಿಕವಾಗಿಯೂ ಸಹ ವೈದ್ಯಕೀಯ ಕಾಲೇಜು, ಅಲ್ಲಿನ ನಿವಾಸಿಗಳಿಗೆ ಸುಭದ್ರವಾದ ಮನೆ ನಿರ್ಮಾಣ ಸೇರಿದಂತೆ ರಕ್ಷಣೆಗಾಗಿ ಪ್ರಧಾನಿ ಮೋದಿ ಕಂಕಣಬದ್ಧರಾಗಿರುವುದು ಅವರಲ್ಲಿನ ದೈವತ್ವ ಸಾಕ್ಷಾತ್ಕಾರ ಕೈ ಹಿಡಿದ ಕನ್ನಡಿಯಾಗಿದೆ ಸ್ವಚ್ಛ-ಸುಂದರ ಆಧ್ಯಾತ್ಮಿಕ ಜೊತೆಗೆ ನಿರ್ಭಯ ಭಾರತ ವನ್ನಾಗಿಸಲು ಪ್ರಧಾನಿ ಮೋದಿಜಿ ಅವರು ಶ್ರಮಿಸುತ್ತಿರುವುದು ದೇಶದಲ್ಲಿ ಪುನಹ ಇತಿಹಾಸ ಮರುಕಳಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಕಾಶಿನಾಥ್ ಚಿತ್ರ ಗಾರ ಜಿಲ್ಲಾ ಕೈಗಾರಿಕಾ ಪ್ರಕೋಷ್ಠ ಸಂಚಾಲಕ ವೀರೇಶ್ ಬಲಕುಂದಿ ಜಿಲ್ಲಾ ಮಾಧ್ಯಮ ಮಹಪರ್ವ ಪ್ರಭಾರಿಗಳ ಆದ ಚಂದ್ರಶೇಖರ ಅಕ್ಕಿ ST ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ್ ಮಹಾಲಿಂಗಪ್ಪ ಶಾಂತಯ್ಯ ಸ್ವಾಮಿ ಮಲ್ಲಿಕಾರ್ಜುನ ದೇವರಮನೆ ರಾಧಾ ಉಮೇಶ್ ಸಂಗಮೇಶ್ ಅಯೋಗ್ಯ ರಾಯಬಾಗಿ ನಗರ ಮೋರ್ಚಾ ಅಧ್ಯಕ್ಷೆ ರೇಖಾ ರಾಯಬಾಗಿ ಓಬಿಸಿ ಮೋರ್ಚಾ ಅಧ್ಯಕ್ಷ ಶರಣು ಕಲ್ಗುಡಿ ಎಷ್ಟು ಮೋರ್ಚಾ ಅಧ್ಯಕ್ಷ ಮಂಜುನಾಥ್ ಕೋಲ್ಕರ್ ದೇವು ಸಂಗಾಪುರ್ ದುರ್ಗೇಶ್ ಅಕ್ಕಿರೊಟ್ಟಿ ಸೇರಿದಂತೆ ದೇವಸ್ಥಾನದ ಅರ್ಚಕರಾದ ಸಂಗಮೇಶ್ ಹಿರೇಮಠ್ ಪ್ರಧಾನ ಕಾರ್ಯದರ್ಶಿ ಸಂಗಯ್ಯ ಸಂಶಿಮಠಶ್ರೀನಿವಾಸ ದೂಳ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಗಂಗಾವತಿ
(ಹನುಮೇಶ್ ಬಟಾರಿ)


Leave a Reply