Belagavi

ಬೆಳಗಾವಿಯಲ್ಲಿ ಎರಡು ಮತ ಅಸಿಂಧು : ಕಾರಣ ಇಲ್ಲಿದೆ


ಬೆಳಗಾವಿ:10ರಂದು ನಡೆದಿದ್ದಂತ ಪರಿಷತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ, ಮತದಾನ ಮಾಡಿದ್ದಂತ ಇಬ್ಬರು ವ್ಯಕ್ತಿಗಳು, ಗೌಪ್ಯ ಮತದಾನ ಕ್ರಮವನ್ನು ಮೀರಿ, ತಾವು ಮಾಡಿದ್ದಂತ ಮತದಾನದ ಪೋಟೋ ತೆಗೆದಿದ್ರು.

ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಸಂಬಂಧ ಚುನಾವಣಾ ಆಯೋಗಕ್ಕೆ ಆ ಪೋಟೋ ತೆಗೆದಿದ್ದಂತ ಎರಡು ಮತಗಳನ್ನು ರಿಜೆಕ್ ಮಾಡುವಂತೆ ಮನವಿ ಕೂಡ ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ 2 ಮತ ರಿಜೆಕ್ಟ್ ಮಾಡಲಾಗಿದೆ.

ಇಂದು 25 ಕ್ಷೇತ್ರಗಳಿಗೆ ನಡೆದಿದ್ದಂತ ವಿಧಾನ ಪರಿಷತ್ತಿನ ಚುನಾವಣೆಯ ಮತಎಣಿಕೆ ಕಾರ್ಯ ಆರಂಭಗೊಂಡಿದೆ. ಬೆಳಗಾವಿಯಲ್ಲಿ ಮತಎಣಿಕೆ ಆರಂಭಗೊಳ್ಳುತ್ತಿದ್ದಂತೆ ಪೋಟೋ ತೆಗೆದ ವಿಚಾರ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳು ಬ್ಯಾಲೆಟ್ ಪೇಪರ್ ವಿಂಗಡಿಸೋ ಸಂದರ್ಭದಲ್ಲಿ, ಪೋಟೋ ತೆಗೆದಿದ್ದಂತ ಪ್ರಕರಣ ಸಂಬಂಧ ಅಭ್ಯರ್ಥಿಗಳು ಹಾಗೂ ಏಜೆಂಟರ್ ಸಮ್ಮುಖದಲ್ಲಿ ಎರಡು ಮತಗಳನ್ನು ಅಸಿಂಧುಗೊಳಿಸಿದ್ದಾರೆ.


Leave a Reply