Belagavi

ಮದ್ಯಾಹ್ನದ ನಂತರವೇ ಬೆಳಗಾವಿ ಪರಿಷತ್ ಚುನಾವಣೆ ಫಲಿತಾಂಶ


ಬೆಳಗಾವಿ : ವಿಧಾನಪರಿಷತ್ತಿನ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ ಇನ್ನೂ ಮತಪೆಟ್ಟಿಗೆಗಳನ್ನ ಮತ ಏಣಿಕೆಯ ಕೋಣೆಗೆ ಸಾಗಿಸುವ ಕಾರ್ಯವೇ ಮುಂದುವರೆದಿದೆ.

ಚಿಕ್ಕೋಡಿಯ ಆರ್ ಡಿ ಕಾಲೇಜಿನಲ್ಲಿ ಸಿಬ್ಬಂಧಿಗಳು ಮತ ಮತಪೆಟ್ಟಿಗೆಗಳ ಸಾಗಾಟದಲ್ಲಿ ತೊಡಗಿದ್ದಾರೆ‌. ಒಟ್ಟು 511 ಮತಪೆಟ್ಟಿಗೆ ಹೊತ್ತು ಮತ ಎಣಿಕೆ ಕೇಂದ್ರಕ್ಕೆ ಸಾಗಿಸುತ್ತಿರುವ ಪ್ರಕ್ರಿಯೆ ಇನ್ನುವರೆಗೂ ನಡೆದಿದೆ ಈ ಪ್ರಕ್ರಿಯೆ 12 ಗಂಟೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಇನ್ನು ಮತಗಳ ಕ್ರೂಡೀಕರಣ ನಡೆಯುತ್ತಿದೆ.ಎಣಿಕೆ ಕಾರ್ಯ 1ಗಂಟೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಅದಾದ ನಂತರ ಯಾರು ಮುಂದೆ,ಯಾರು ಹಿಂದೆ ಅನ್ನೋದು ಗೊತ್ತಗಲಿದೆ.ಅಲ್ಲಿಯವರೆಗೆ ಫಲಿತಾಂಶದ ಮಾಹಿತಿಗಾಗಿ ಕಾಯಲೇಬೇಕು.


Leave a Reply