Belagavi

ಲಕ್ಷ್ಮೀ ಹೆಬ್ಬಾಳಕರ ಮತ್ತು ಸತೀಶ್ ಜಾರಕಿಹೊಳಿ ಕಾಂಬಿನೇಷನ್ ವರ್ಕೌಟ್ ಆಗಿದೆ ಎಂದ ಚನ್ನರಾಜ


ಲಕ್ಷ್ಮೀ ಹೆಬ್ಬಾಳಕರ ಮತ್ತು ಸತೀಶ್ ಜಾರಕಿಹೊಳಿ ಟೀಂ ವರ್ಕ್ ವರ್ಕೌಟ್ ಆಗಿದೆ. ಸ್ವಾಭಿಮಾನಿ ಮತದಾರರ ಕಾಂಗ್ರ್ರೆಸ್ ಬೆಂಬಲಿಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಚನ್ನರಾಜ ಹಟ್ಟಿಹೊಳಿ ಮಾದ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನ ಪರಿಷತ್ ಚುನಾವಣಾ ಪಲಿತಾಂಶ ಪ್ರಕಟದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಮೇಲೆ ನಂಬಿಕೆ ಇಟ್ಟು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಟಿಕೆಟ್ ನೀಡಿದ್ದರು ಇಂದು ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೆವೆ ಎಂದರು.

ಈ ಗೆಲವು ಪ್ರತಿಷ್ಟೆ ಅನ್ನೊದಕ್ಕಿಂತಲೂ ಕಾಂಗ್ರೆಸ್ಗೆ ಅನಿವಾರ್ಯವಾಗಿತ್ತು  ಏಕೆಂದರೆ ಜಿಲ್ಲೆಯ ಎಲ್ಲ ನಾಯಕರು ಚುನಾವಣೆಯಲ್ಲಿ ಕಷ್ಟಪಟ್ಟು ಪ್ರಚಾರ ಮಾಡಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಕಾಂಬಿನೇಷನ್ ವರ್ಕ್ ಜಿಲ್ಲೆಯ ಜನರಿಗೆ ಮೆಚ್ಚುಗೆಯಾಗಿದ್ದು ಕಾಂಗ್ರೆಸನ್ನು ಭರ್ಜರಿ ಮತಗಳಿಂದ ಗೆಲ್ಲಿಸಿದ್ದಾರೆ ಎಂದರು.


Leave a Reply