Belagavi

ಜನರ ಲೆಕ್ಕ ಗೊತ್ತಾಗಿದೆ ಇನ್ನು ಮುಂದೆ ಕಾಂಗ್ರೆಸ್… ಡಿಕೆಶಿ…ಐ


ಬೆಳಗಾವಿ:ಈ  ಚುನಾವಣೆಯಲ್ಲಿ ರಾಜ್ಯದ ಒಟ್ಟಾರೆ ಮತದಾರರು, ನಾಯಕರ ಲೆಕ್ಕ ಏನು ಎಂಬುದು ಗೊತ್ತಾಗಿದೆ. ಇವರು ಪ್ರಬುದ್ಧ ನಾಯಕರು. ಜನ ಅವರನ್ನು ಪಂಚಾಯ್ತಿ ಹಾಗೂ ಪಾಲಿಕೆಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಪ್ರಜ್ಞಾವಂತ ಮತದಾರರು ಈಗ ಯಾವ ದಿಕ್ಕು ತೋರಿಸಿದ್ದಾರೆ ಎಂಬುದು ಮುಖ್ಯ.

ನಾವು ಕೆಲವು ಕಡೆ ಸೋತಿರಬಹುದು. ಈ ಫಲಿತಾಂಶದಿಂದ ಸಮಾಧಾನ ಇದೆಯಾದರೂ ಅತಿಯಾದ ಸಂತೋಷವಾಗಿಲ್ಲ. ನಾವು 13 ಅಥವಾ 14 ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. 11 ಕ್ಷೇತ್ರದಲ್ಲಿ ಜಯ ಬಂದಿದೆ. ಕಲಬುರ್ಗಿ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ನಿರೀಕ್ಷೆ ಇತ್ತು. ಬೆಳಗಾವಿ, ಧಾರವಾಡ, ಬಿಜಾಪುರ ಹಾಗೂ ಬಾಗಲಕೋಟೆಯ ಮತದಾನ ಬಿಜೆಪಿಗೆ ಯಾವ ರೀತಿ ಹಿನ್ನಡೆಯಾಗಿದೆ ಎಂಬುದಕ್ಕೆ ಸಾಕ್ಷಿ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಗ್ರಸ್ಥಾನ ಪಡೆದಿದೆ. ಸಿಎಂ ತವರೂರಲ್ಲೂ ನಮ್ಮ ನಿರೀಕ್ಷೆ ಮೀರಿ, ಮತದಾರರು ಬಿಜೆಪಿ ಅಭ್ಯರ್ಥಿ ವಿರುದ್ಧ ಮತ ಹಾಕಿದ್ದಾರೆ. ಇಲ್ಲಿ ಯಾರನ್ನು ಹೊಣೆ ಮಾಡಬೇಕು ಎಂದು ಬಿಜೆಪಿಯೇ ತೀರ್ಮಾನಿಸಲಿ. ಒಟ್ಟಿನಲ್ಲಿ ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಹಾನಗಲ್ ನಲ್ಲಿ ಮತದಾರ ಬದಲಾವಣೆ ಬಯಸಿದರೆ, ಈ ಚುನಾವಣೆಯಲ್ಲಿ ನಾಯಕರು ಬದಲಾವಣೆ ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. 2024ರ ರಾಷ್ಟ್ರೀಯ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ದಕ್ಷಿಣ ಭಾರತದ ಹೆಬ್ಬಾಗಿಲಾಗಲಿದೆ’.

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಬಹಳ ಒಗ್ಗಟ್ಟಿನಿಂದ ಕೆಲಸ ಮಾಡಿದ ನಮ್ಮ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಬಿಜೆಪಿಯವರು ಯಾರನ್ನು ಸೋಲಿಸುತ್ತಾರೋ, ಯಾರು ಗೂಂಡಾ ಎಂಬುದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಹೇಳಬೇಕು. ಬೊಮ್ಮಾಯಿ ಅವರು ಪಕ್ಕದಲ್ಲಿ ಕೂರಿಸಿಕೊಂಡು ನಾನು ಒಂದು ಮತ ಕೇಳುತ್ತಿದ್ದೇನೆ, ಮತ್ತೊಂದು ಅವರಿಗೆ ಬಿಟ್ಟಿದ್ದೇನೆ ಎಂದು ಹೇಳಿದರೆ ಮತ್ತಿನ್ನೇನು ಆಗುತ್ತದೆ? ಈ ಸೋಲನ್ನು ಯಾರ ಮೇಲೆ ಹಾಕೋಣ? ಒಟ್ಟಿನಲ್ಲಿ ಅವರಿಗೆ ಒಳ್ಳೆಯದಾಗಲಿ.

ಈ ಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನ ಹಾಗೂ ಜನಪ್ರತಿನಿಧಿಗಳು ಈಗಾಗಲೇ ತೀರ್ಮಾನಿಸಿದ್ದಾರೆ. ನಾನು ದಿಕ್ಕು ತೋರಿಸುತ್ತಿಲ್ಲ. ಮುಂದೆ ನಾವು ಈ ದಿಕ್ಕಿನಲ್ಲಿ ಸಾಗುತ್ತೇವೆ ಎಂದು ಜನರೇ ಹೇಳುತ್ತಿದ್ದಾರೆ’ ಎಂದರು.

ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹಣ ಬಲದಿಂದ ಗೆದ್ದಿವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ನಮಗೆ ಬಲ ಇದೆ ಅಂತಾ ಹೇಳಿದ್ದಾರಲ್ಲಾ ಅದೇ ಸಂತೋಷ’ ಎಂದರು.

ಪರಿಷತ್ ಚಿಂತಕರ ಛಾವಡಿಯಾಗುವ ಬದಲು ಶ್ರೀಮಂತರ ಛಾವಡಿಯಾಗುತ್ತಿದೆ ಎಂಬ ಟೀಕೆಗೆ, ‘ಅವರು ಚಿಂತನೆ ಮಾಡುತ್ತಿರಲಿ, ನಾವು ದೇಶವನ್ನು ಶ್ರೀಮಂತ ಮಾಡುತ್ತೇವೆ’ ಎಂದರು.

ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದು, ಈಗಿನಿಂದಲೇ ಆಪರೇಷನ್ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಯಾರನ್ನೂ ಬಲವಂತವಾಗಿ ಕರೆಯುತ್ತಿಲ್ಲ. ನಮ್ಮ ಪಕ್ಷದ ಸಿದ್ಧಾಂತ, ನಾಯಕತ್ವ ಮೆಚ್ಚಿ ಬೇಷರತ್ತಿನಿಂದ ಪಕ್ಷಕ್ಕೆ ಬರಲು ಇಚ್ಚಿಸಿದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಕೋನರೆಡ್ಡಿ ಅವರ ಸೇರ್ಪಡೆ ಬಗ್ಗೆ ಪಕ್ಷದ ಹೈಕಮಾಂಡ್ ಗಮನಕ್ಕೂ ತಂದಿದ್ದೇವೆ. ಅವರೊಬ್ಬ ಹಿರಿಯ ನಾಯಕರಾಗಿದ್ದು, ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಸೋಲಿಸಲು ಎಲ್ಲ ತಯಾರಿ ಮಾಡಿದ್ದೇವೆ, 14 ರಂದು ಯುದ್ಧ ಸಾರುತ್ತೇವೆ ಎಂಬ ಬೆಳಗಾವಿ ಬಿಜೆಪಿ ಶಾಸಕರೊಬ್ಬರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಅವರು ಯಾವ ವಾರ್ ಮಾಡುತ್ತಾರೋ ಅವರನ್ನೇ ಕೇಳಿ. ಅವರು ಬಿಚ್ಚಿದ್ದು, ಅವರು ಏನು ಮಾಡಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ’ ಎಂದು ಛೇಡಿಸಿದರು.

ಎಸ್ಡಿಪಿಐ ನಾಯಕರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೇರೆ ಯಾವುದೇ ನಾಯಕರ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಈ ನೆಲದಲ್ಲಿ ಕಾನೂನಿದೆ. ಶ್ರೀರಂಗಪಟ್ಟಣ ಶಾಂತಿ ಪ್ರಿಯ ನೆಲ. ಯಾವುದೇ ಸಮುದಾಯ ಇಲ್ಲಿನ ಸಂಸ್ಕೃತಿ ಹಾಗೂ ಶಾಂತಿಗೆ ಧಕ್ಕೆ ತರಲು ಅವಕಾಶ ನೀಡುವುದಿಲ್ಲ’ ಎಂದರು.


Leave a Reply