Belagavi

ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಕಾರ್ಯಕರ್ತರೇ ಹೊಣೆ : ಸಚಿವ ಈಶ್ವರಪ್ಪ


ಬೆಳಗಾವಿ : ಬೆಳಗಾವಿ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು. ಸೋಲು ಗೆಲುವಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ 6ರಿಂದ 11ಕ್ಕೆ ಏರಿದೆ. ಕಾಂಗ್ರೆಸ್ 3, ಜೆಡಿಎಸ್​ನಿಂದ 2 ಕಸಿದುಕೊಂಡು ಗೆದ್ದಿದ್ದೇವೆ, ಸೋತರೂ ಮೀಸೆ ಮಣ್ಣಾಗಿಲ್ಲ ಅಂತಾರೆ ಕಾಂಗ್ರೆಸ್​ನವರು. ಸೋತರೂ ಕಾಂಗ್ರೆಸ್ ಪಕ್ಷವೇ ಗೆದ್ದಿದೆ ಅನ್ನೋದು ಎಷ್ಟು ಸರಿ. ಬೆಳಗಾವಿ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು. ಸೋಲು ಗೆಲುವಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಹೇಳಿದ್ದಾರೆ.


Leave a Reply