Belagavi

ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ


ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಲವೇ ದಿನಗಳಲ್ಲಿ ಡಿ ಕೆ ಶಿವಕುಮಾರ್ ಗೆ ಕಠೋರ ಉತ್ತರ ನೀಡುತ್ತೇನೆ, ಮೊದಲು ಎಲ್ಲವೂ ಸರಿಯಾಗಿತ್ತು, ಕೊನೆಯ ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಬದಲಾಯಿತು, ನಾನು ದೊಡ್ಡ ಬಾಂಬು ಸಿಡಿಸಬಹುದು ಆದರೆ ಈಗಲೇ ಹೇಳುವುದಿಲ್ಲ, ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ಕುತೂಹಲವನ್ನು ಹಾಗೆಯೇ ಇರಿಸಿದ್ದಾರೆ.

 

ನನಗೆ ಪಕ್ಷ ಮತ್ತು ಸಂಘದಿಂದ ಫೋನ್ ಬಂದಿದೆ, ಕೊನೆಯ ನಾಲ್ಕು ದಿನಗಳಲ್ಲಿ ಚಿತ್ರಣ ಬದಲಾಯಿತು, ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವರಿಗೆ ಭಯ ಶುರುವಾಗಿದೆ, ಹಿಂದುಳಿದ ನಾಯಕನಾಗಿ ಅವನ ಜನಾಂಗದವರೇ ಆತನನ್ನು ಮೂಲೆಗುಂಪು ಮಾಡುತ್ತಿದ್ದಾರೆ, ಸೋಲುವ ಮನುಷ್ಯನ ಬಗ್ಗೆ ನಾನು ಏನು ಹೇಳಲಿ ಎಂದು ಏಕವಚನದಲ್ಲಿಯೇ ಹೇಳಿದರು.ನಮ್ಮ ಪಕ್ಷ ಸೋಲಬಾರದಿತ್ತು, ಸೋತಿದೆ, ಮುಂದಿನ ದಿನಗಳಲ್ಲಿ ಎಲ್ಲ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.


Leave a Reply