Belagavi

ಬಿಜೆಪಿ ಸೋಲಿಗೆ ರಮೇಶ್ ಮತ್ತು ಬಾಲಚಂದ್ರ ಕಾರಣರಲ್ಲ: ಲಖನ್ ಜಾರಕಿಹೊಳಿ


ಬೆಳಗಾವಿ : ಲಿಂಗಾಯತ ಸಮುದಾಯದ ಮತಗಳು ಇಬ್ಬಾಗ ಆಗಿದ್ದರಿಂದ ಬಿಜೆಪಿಗೆ ಸೋಲಾಯಿತು. ಬಿಜೆಪಿ ಅಭ್ಯರ್ಥಿ ಮತ್ತು ಡಿ.ಕೆ.ಶಿವಕುಮಾರ್ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಇದರಿಂದ ಅವರಿಗೆ ಸೋಲಾಯಿತು.

ಇದರಲ್ಲಿ ರಮೇಶ್ ಅಥವಾ ಬಾಲಚಂದ್ರ ಜಾರಕಿಹೊಳಿಯದ್ದು ಏನೂ ಪಾತ್ರವಿಲ್ಲ. ಕಾಂಗ್ರೆಸ್ಸಿನವರು ಜಾಸ್ತಿ ಮತ ಪಡೆದು ಬಿಜೆಪಿಯಿಂದ ಅನುಕೂಲ ಪಡೆದುಕೊಂಡರು ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ, ನಾವು ಎರಡು ಮತ್ತು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ಇದ್ದೆವು, ಆದರೆ, ಡಿ.ಕೆ.ಶಿವಕುಮಾರ್ ಅವರು ಫಿಕ್ಸಿಂಗ್ ಮಾಡಿಕೊಂಡರು. ಕೊನೇ ಗಳಿಗೆಯಲ್ಲಿ ಬಿಜೆಪಿ ಮತಗಳು ಕಾಂಗ್ರೆಸ್ಸಿಗೆ ಬಿದ್ದವು.

ಬಿಜೆಪಿ ಸೋಲಿಗೆ ನನ್ನ ಸಹೋದರರು ಕಾರಣರಲ್ಲ, ಇದಕ್ಕೆ ನೇರ ಕಾರಣ ಡಿಕೆಶಿಯವರ ಫಿಕ್ಸಿಂಗ್. ಬಿಜೆಪಿಯವರು ಮಾಡಿದ್ದನ್ನು ಅನುಭವಿಸುತ್ತಿದ್ದಾರೆ, ಜನರೇನು ಮೂರ್ಖರಲ್ಲ. ಹದಿನೆಂಟು ಮತಕ್ಷೇತ್ರಗಳು ಬರುವುದರಿಂದ ಎಲ್ಲಾ ಕಡೆ ಸುತ್ತಾಡಿದ್ದೇನೆ, ಜನತೆಗೆ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ” ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.


Leave a Reply