Belagavi

೫ಲಕ್ಷ ಮನೆಗಳ ನಿರ್ಮಾಣಕ್ಕೆ ಸರಕಾರ ಆದೇಶ: ವಸತಿ ಸಚಿವ ವಿ.ಸೋಮಣ್ಣ


ಬೆಳಗಾವಿ ಸುವರ್ಣಸೌಧ,ಡಿ.೧೫: ರಾಜ್ಯದಲ್ಲಿ ೫ಲಕ್ಷ ಮನೆಗಳ ನಿರ್ಮಾಣಕ್ಕೆ ಸರಕಾರ ಕಾರ್ಯಾದೇಶ ಹೊರಡಿಸಿದ್ದು, ಜನೆವರಿ ೨೫ರೊಳಗೆ ಪಟ್ಟಿಗಳನ್ನು ಸಲ್ಲಿಸುವಂತೆ ಜಿಪಂ ಸಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಕೆ.ಹರೀಶಕುಮಾರ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪ್ರತಿ ಮನೆಗೆ ೧.೨೦ಲಕ್ಷ ರೂ.ಗಳನ್ನು ಮೂರುಕಂತುಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು. ೨೦೨೨ರೊಳಗೆ ಮನೆಯೊಳಗೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ವಿವಿಧ ವಸತಿ ಯೋಜನೆಗಳಡಿ ೨೦೧೫ರಿಂದ ೨೦೨೧ರವರೆಗೆ ೮೭೬೩ ಮನೆಗಳು ಮಂಜೂರು ಮಾಡಲಾಗಿತ್ತು;ಅವುಗಳಲ್ಲಿ ೫೭೦೫ ಮನೆಗಳು ಪೂರ್ಣಗೊಂಡಿದ್ದು,೧೪೫೮ ಮನೆಗಳು ಪ್ರಗತಿಯಲ್ಲಿವೆ.ಫಲಾನುಭವಿಗಳ ಖಾತೆಗೆ ೮೦.೦೩ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
*ಬುಡಕಟ್ಟು ಸಮುದಾಯಗಳಿಗೆ ಮನೆಗಳ ನಿರ್ಮಾಣ ಪ್ಯಾಕೇಜ್: ರಾಜ್ಯದಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಕೀಂ ಅಡಿ ಹಾಗೂ ದೇವರಾಜು ಅರಸು ವಸತಿ ಯೋಜನೆ ಅಡಿ ಮನೆಗಳು ಒದಗಿಸುವುದಕ್ಕೆ ಅವಕಾಶವಿದ್ದರೂ ಆ ಜನರಿಗೆ ಮನೆಗಳು ಸಿಗುತ್ತಿಲ್ಲ ಸದಸ್ಯ ಶಾಂತರಾಮ ಬುಡ್ನ ಸಿದ್ದಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಸಹಮತ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಬುಡಕಟ್ಟು ಸಮುದಾಯಗಳಿಗಾಗಿಯೇ ಪ್ರತ್ಯೇಕವಾಗಿ ೧೫ರಿಂದ ೨೦ ಸಾವಿರ ಮನೆಗಳನ್ನು ಮಂಜೂರು ಮಾಡಲಾಗುವುದು. ಆ ಫಲಾನುಭವಿಗಳಿಗೆ ೧.೨೦ಲಕ್ಷಗಳ ಜೊತೆಗೆ ಹೆಚ್ಚುವರಿಯಾಗಿ ೩೦ ಸಾವಿರ ರೂ.ಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.


Leave a Reply