Belagavi

೧೭೪ ವಿಧಾನಸಭಾ ಕ್ಷೇತ್ರಗಳಲ್ಲಿ ಪೋಡಿ ಮುಕ್ತ ಗ್ರಾಮಕ್ಕೆ ಪಣ: ಸಚಿವ ಅಶೋಕ


ಬೆಳಗಾವಿ ಸುವರ್ಣಸೌಧ,ಡಿ.೧೫: ರಾಜ್ಯದ ೨೨೪ವಿಧಾನಸಭಾ ಕ್ಷೇತ್ರಗಳ ಪೈಕಿ ನಗರಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ೧೭೪ ವಿಧಾನಸಭಾ ಕ್ಷೇತ್ರಗಳಲ್ಲಿ ಪೋಡಿ ಮುಕ್ತ ಗ್ರಾಮಯೋಜನೆ ಪ್ರಾರಂಭಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಸುನೀಲ್‌ಗೌಡ ಬಸವನಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಯೋಜನೆ ಅಡಿಯಲ್ಲಿ ಈವರೆಗೆ ಒಟ್ಟು ೧೬೪೫೪ ಗ್ರಾಮಗಳಲ್ಲಿ ೨೧,೪೪,೫೩೪ ಬ್ಲಾಕ್‌ಗಳ ಅಳತೆ ಕಾರ್ಯಪೂರೈಸಿ,೨೦,೩೩,೮೫೭ ಏಕವ್ಯಕ್ತಿ ಪಹಣಿಗಳನ್ನು ಸೃಜಿಸುವ ಮೂಲಕ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ ಎಂದರು.
ಸಾರ್ವಜನಿಕರು ದೈನಂದಿನ ಕೆಲಸಗಳಿಗಾಗಿ ಅಳತೆ ಕೋರಿ ಸಲ್ಲಿಸುವ ೧೧ಇ, ಅನ್ಯಕ್ರಾಂತ, ತತ್ಕಾಲ್ ಪೋಡಿ,ಹದ್ದುಬಸ್ತು,ಇತ್ಯಾದಿ ಅರ್ಜಿಗಳ ಹಾಗೂ ತಾಲೂಕುಗಳಲ್ಲಿ ಬರುವ ಸ್ಥಳೀಯ ತೊಂದರೆಗಳ ಬಗ್ಗೆ ಅಳತೆ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ,ಅಳತೆ ಕಾರ್ಯಗಳನ್ನು ಪೂರೈಸಲು ಅವಶ್ಯಕವಾದ ಭೂಮಾಪಕರನ್ನು ಹೊರತುಪಡಿಸಿ ಉಳಿದ ಭೂಮಾಪಕರನ್ನು ಬಳಸಿಕೊಂಡು ಪೋಡಿಮುಕ್ತ ಗ್ರಾಮ ಅಭಿಯಾನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


Leave a Reply