Belagavi

ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸಲ್ಲಿಸಿದ ಮೇಲ್ಮನೆ


ಬೆಳಗಾವಿ ಸುವರ್ಣಸೌಧ,ಡಿ.೧೫:ಕರ್ನಾಟಕ ವಿಧಾನಪರಿಷತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿ ವಿಧಾನಪರಿಷತ್‌ಗೆ ಆಗಮಿಸಿದ ಸಭಾನಾಯಕರು ಆಗಿರುವ ಸಮಾಜಕಲ್ಯಾಣ ಸಚಿವ ಕೋಟಶ್ರೀನಿವಾಸ ಪೂಜಾರಿ ಅವರಿಗೆ ಮೇಲ್ಮನೆ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಚಿಂತಕರ ಚಾವಡಿಗೆ ಮೆರಗು ತರುವ ಕೆಲಸವನ್ನು ಕೋಟ ಶ್ರೀನಿವಾಸ ಅವರು ಮಾಡಿದ್ದಾರೆ; ಹಣ ಖರ್ಚು ಮಾಡದೇ ಆಯ್ಕೆಯಾಗಿ ಬಂದ ಕೋಟ ಅವರ ಚುನಾವಣಾ ಮಾದರಿ ಎಲ್ಲರೂ ಮುಂದುವರಿಸಬೇಕಿದೆ;ಈ ಮೂಲಕ ಚಿಂತಕರ ಚಾವಡಿ ಪಟ್ಟ ಉಳಿಸಿಕೊಳ್ಳಬೇಕಿದೆ ಎಂದು ವಿರೋಧಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್ ಸೇರಿದಂತೆ ಅನೇಕ ಸದಸ್ಯರು ಪ್ರತಿಪಾದಿಸಿದರು.
ಸದಸ್ಯ ಶ್ರೀಕಂಠೇಗೌಡ ಅವರು ಕೋಟ ಶ್ರೀನಿವಾಸ ಪೂಜಾರಿ ಅವರು ಮೂಲತಃ ಫೋಟೊಗ್ರಾಫರ್ ಆಗಿ, ಕಿರಾಣಿ ಅಂಗಡಿಯಲ್ಲಿ ಕೆಲಸದಲ್ಲಿದ್ದುಕೊಂಡು,ನAತರ ಹೋರಾಟದ ಮೂಲಕ ಪರಿಷತ್‌ಗೆ ಬಂದಿದ್ದಾರೆ. ಅವರ ಹೋರಾಟದ ನಿಲುವು ಮತ್ತು ಸೈದ್ಧಾಂತಿಕ ವ್ಯಕ್ತಿತ್ವಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಭಾನಾಯಕ ಸ್ಥಾನಕ್ಕೆ ಘನತೆ,ಗೌರವ ತಂದುಕೊಟ್ಟಿದ್ದಾರೆ ಎಂದು ಬಹುತೇಕ ಸದಸ್ಯರು ಪ್ರಶಂಸಿಸಿದರು.
ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರ ಬಗ್ಗೆಯೂ ಅನೇಕ ಸದಸ್ಯರು ಮೆಚ್ಚುಗೆ ಮಾತುಗಳನ್ನಾಡಿದರು;ತಾವು ಈ ಪರಿಷತ್‌ನಲ್ಲಿ ಇರಬೇಕಿತ್ತು ಅನಿಸುತ್ತದೆ.ತಾವು ಮತ್ತೊಮ್ಮೆ ಪರಿಷತ್‌ಗೆ ಬನ್ನಿ ಎಂದು ಆಶಿಸಿದರು.


Leave a Reply