Koppal

ಅತಿಥಿ ಉಪನ್ಯಾಸಕರಲ್ಲಿದ ಕಾರಣ ವಿದ್ಯಾರ್ಥಿಗಳು ಬೀದಿ ಗಿಳಿದು ಪ್ರತಿಭಟನೆ-ತಹಸೀಲ್ದಾರ ಸಿದ್ದೇಶ ಎಂ ರವರಿಗೆ ಮನವಿ


ಕುಷ್ಟಗಿ:15-ಈಗಾಗಲೇ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭವಾಗಿವೆ ಇದರಿಂದ ವಿದ್ಯಾರ್ಥಿಗಳು ಸಹ ಶಾಲಾ ಕಾಲೇಜುಗಳಿಗೆ ಪ್ರತಿ ನಿತ್ಯ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ.

ಕೋವಿಡ್ ನಿಂದ ಕೆಲವು ತಿಂಗಳು ಗಳಿಂದ ಶಾಲಾ ಕಾಲೇಜುಗಳು ಬಂದಾಗಿದ್ದವು.

ಈ ಕಾರಣಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ಬಹಳ ದೂರ ಉಳಿದಂತಾಗಿದೆ.

ಶಾಲಾ ಕಾಲೇಜುಗಳು ಅತಿಥಿ ಉಪನ್ಯಾಸಕರು ಸತತ ಒಂದು ವಾರಗಳಿಂದ ಉಪನ್ಯಾಸಕರು ಆಗಮಿಸುತ್ತಿಲ್ಲ.

ಒಂದು ಕಡೆ ಅತಿಥಿ ಉಪನ್ಯಾಸಕರ ಬೇಡಿಕೆಗಳು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಉಪನ್ಯಾಸಕರು ಶಾಲಾ ಕಾಲೇಜುಗಳಿಗೆ ಬರುತ್ತಿಲ್ಲಾ.

ಹೀಗೆ ಅತಿಥಿ ಉಪನ್ಯಾಸಕರ ಸತತ ಗೈರಿನಿಂದ ಕಂಗೆಟ್ಟು ವಿಧ್ಯಾರ್ಥಿಗಳು ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ ಇಂದು ಕುಷ್ಟಗಿ ಯ ಪ್ರಥಮ ದರ್ಜೆ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಬಹಿಷ್ಕಾರ ಹಾಕಿ ಕುಷ್ಟಗಿ ತಹಸೀಲ್ದಾರ ರ ಕಛೇರಿಯ ವರೆಗೆ ಶಾಂತಿ ಯುತ ಪ್ರತಿಭಟನೆ ಮೂಲಕ ತಹಸೀಲ್ದಾರ ಸಿದ್ದೇಶ ಎಂ ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಷ್ಟಗಿ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಈ ಶಾಂತಿಯುತ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply