Koppal

ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಿಸಿದ ತಹಸೀಲ್ದಾರರು ಹಾಗೂ ಸಿಬ್ಬಂದಿ


ಕುಷ್ಟಗಿ:-ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರ ಈ ಹಿಂದೆ ಭರವಸೆ ಕೊಟ್ಟ ಪ್ರಕಾರ ಅವರ ಕುಟುಂಬದ ಸದಸ್ಯರನ್ನು ಬೇಟಿ ಮಾಡಿ 1 ಲಕ್ಷ ರೂಪಾಯಿ ಮೊತ್ತದ ಚೆಕ್ ನ್ನು ಸರ್ಕಾರದ ಪರವಾಗಿ ಆಯಾ ಕಂದಾಯ ಅಧಿಕಾರಿಗಳು ನೀಡಿದರು.

ಕೋವಿಡ್ ಸಂಕಷ್ಟ ಕ್ಕೆ ಬಲಿಯಾದ ಕುಟುಂಬಕ್ಕೆ ಸರ್ಕಾರ ಪರಿಹಾ ನೀಡುವುದಾಗಿ ಘೋಷಣೆ ಮಾಡಿತ್ತು.ಕೋವಿಡ್ ನಿಂದ ಮೃತಪಟ್ಟ ಮನೆಗಳಿಗೆ ತೆರಳಿ ಗ್ರಾಮಸ್ಥರ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಚೆಕ್ ಹಸ್ತಾಂತರ ಮಾಡಿದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply