Belagavi

ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ :ಬೆಳಗಾವಿಯಲ್ಲಿ ಸಿಎಂ ಘೋಷಣೆ


ಬೆಳಗಾವಿ : ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 5 ಪಟ್ಟು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ.ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ಅವರು ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 5 ಪಟ್ಟು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನವನ್ನು ಇದೀಗ ಐದು ಪಟ್ಟು ಹೆಚ್ಚಿಸಿದೆ.

ಪರಮವೀರ ಚಕ್ರ 25 ಲಕ್ಷದಿಂದ 1.5 ಕೋಟಿ ರೂ. ಗೆ ಹೆಚ್ಚಳ ಮಾಡಲಾಗಿದೆ. ಮಹಾವೀರ ಚಕ್ರ 12 ಲಕ್ಷದಿಂದ 1 ಕೋಟಿ‌ ರೂ.ಗೆ ಏರಿಕೆ ಮಾಡಲಾಗಿದೆ.

ಅಶೋಕ ಚಕ್ರ ಪ್ರಶಸ್ತಿ ನಗದು ಬಹುಮಾನವನ್ನು 25 ಲಕ್ಷದಿಂದ 1.5 ಕೋಟಿ ರೂ. ಕೀರ್ತಿ ಚಕ್ರ ಪ್ರಶಸ್ತಿಗೆ 12 ಲಕ್ಷರೂ.ನಿಂದ 1 ಕೋಟಿ ರೂಗೆ, ವೀರ ಚಕ್ರ ಪ್ರಶಸ್ತಿ 8 ಲಕ್ಷದಿಂದ 50 ಲಕ್ಷ ರೂಪಾಯಿ, ಶೌರ್ಯ ಚಕ್ರ 8 ಲಕ್ಷದಿಂದ 50 ಲಕ್ಷ ರೂ. ಸೇನಾ ಮೆಡಲ್‌ 2 ಲಕ್ಷದಿಂದ 15 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.


Leave a Reply