Belagavi

ಸುವರ್ಣ ಸೌಧದ ಗೇಟ್ ಬಳಿ ಹೈಡ್ರಾಮಾ : ಪೊಲೀಸರ ನಡುವೆ ಕಾರ್ಯಕರ್ತರು ವಾಗ್ವಾದ


ಬೆಳಗಾವಿ: ರಾಜ್ಯ ಸರ್ಕಾರದ ಪರ್ಸಂಟೇಜ್ ರಾಜಕಾರಣದ ವಿರುದ್ಧ ಕಾಂಗ್ರೆಸ್ ಇಂದು ಸಮರ ಸಾರಿದೆ. ಕಾಂಗ್ರೆಸ್ ಕಚೇರಿಯಿಂದ ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಂದ ಪರ್ಸಂಟೇಜ್ ರಾಜಕಾರಣ ಮಾಡುತ್ತಿರೋ ಬಗ್ಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಗುತ್ತಿದೆ.

ಬೆಳಗಾವಿಯ ಸುವರ್ಣ ಸೌಧಕ್ಕೆ ಆಗಮಿಸಿದಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ದಂಡು, ಸುವರ್ಣ ಸೌಧದ ಗೇಟ್ ಬಳಿಯಲ್ಲಿ ದೊಡ್ಡ ಹೈಡ್ರಾಮವೇ ನಿರ್ಮಾಣವಾಗಿದೆ.

ಬೆಳಗಾವಿಯಲ್ಲಿ ಇಂದು ರಾಜ್ಯ ಸರ್ಕಾರವು ಗುತ್ತಿಗೆದಾರರಿಂದ ಪರ್ಸಂಟೇಜ್ ಪಡೆಯುತ್ತಿರೋದು, ನೆರೆ ಪರಿಹಾರ ನೀಡದೆ ಇರೋದು ಸೇರಿದಂತೆ ವಿವಿಧ ವಿಚಾರಗಳ ವಿರುದ್ಧ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಕಚೇರಿಯಿಂದ ಸಾಗಿ ಬಂದಂತ ಮೆರವಣಿಗಾ Rally ಇದೀಗ ಬೆಳಗಾವಿಯ ಸುವರ್ಣ ಸೌಧ ತಲುಪಿದೆ.

ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹೆಚ್ ಕೆ ಪಾಟೀಲ್ ಸೇರಿದಂತೆ ವಿವಿಧ ಕಾಂಗ್ರೆಸ್ ಘಟಾನು ಘಟಿ ನಾಯಕರು ಪ್ರತಿಭಟನಾ ಮೆರೆವಣಿಗೆ ನಡೆಸುತ್ತಿದ್ದು. ಸುವರ್ಣ ಸೌಧದ ಗೇಟ್ ಮುಂದೆ ಈಗ ಹೈಡ್ರಾಮವೇ ಸೃಷ್ಠಿಯಾಗಿದೆ.

ಸುವರ್ಣ ಸೌಧದ ಗೇಟ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ ನಡೆಯುತ್ತಿದ್ದು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.


Leave a Reply