Belagavi

ಕೊಲ್ಹಾಪುರದಲ್ಲಿ ನಾಡಧ್ವಜ ಸುಟ್ಟ ಮರಾಠಿಗರು:ಸಚಿವ ಕಾರಜೋಳ ಖಂಡನೆಬೆಳಗಾವಿ: ಮಹಾರಾಷ್ಟ್ರದಲ್ಲಿ ಮರಾಠಿಗರು, ನಾಡಧ್ವಜವನ್ನು ಸುಟ್ಟಿರೋ ಘಟನೆ ನಡೆದಿದೆ. ಇದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಖಂಡಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರದಲ್ಲಿ ನಾಡಧ್ವಜ ಸುಟ್ಟ ಘಟನೆ ಖಂಡನೀಯ.

ನಮ್ಮ ನಾಡು, ನುಡಿ, ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ಕರ್ನಾಟಕದಲ್ಲಿ ಮರಾಠಿ – ಕನ್ನಡ ಭಾಷಿಕರಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದೆವೆ. ಇದಕ್ಕೆ ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.


Leave a Reply