Belagavi

ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದ ಶಾಖೆಗಳಿಗೆ ಇಲಾಖೆಯ ನಿರ್ದೇಶಕರ ಭೇಟಿ


ಬೆಳಗಾವಿ:ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ, ಮತ್ತು ಇದರ ವಿವಿಧ ಶಾಖೆಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ:ಸತಿಶಕುಮಾರ್ ಹೊಸಮನಿ ಅವರು ಭೇಟಿನೀಡಿ ದರು. ನಗರದ ಮಹಾಂತೇಶ ನಗರ, ರಾಮತೀರ್ಥ ನಗರ ಮತ್ತು ಕಣಬರ್ಗಿ ಗ್ರಂಥಾಲಯಗಳಿಗೆ ಭೇಟಿನೀಡಿ ಅಲ್ಲಿಯ ಗ್ರಂಥಾಲಯಗಳ ಕಾರ್ಯನಿರ್ವಹನೆ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

ಓದುಗರು , ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಓದುವ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಗ್ರಂಥ ಗಳು ಗ್ರಂಥಾಲಯದಲ್ಲಿ ಇದ್ದು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ದಲ್ಲೂ ಸಾಕಷ್ಟು ಪುಸ್ತಕ, ವಿಡಿಯೋ ಗಳು ಲಭ್ಯವಿದ್ದು,ಸಾರ್ವಜನಿಕರು ಇದರಲ್ಲಿ ಉಚಿತವಾಗಿ ನೊಂದನಿಯಾಗಿ ತಮ್ಮ ಮೊಬೈಲ್,ಕಂಪ್ಯೂಟರ್ ಲ್ಯಾಪ್ ಟ್ಯಾಪ್ ಗಳಲ್ಲಿ ಉಪಯೋಗಿಸಬಹುದು. ಈ ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಯ ಉಪನಿರ್ದೇಕರಾದ ಶ್ರೀ ರಾಮಯ್ಯ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.


Leave a Reply