Belagavi

ಹೊರಗಿನಿಂದ ಬಂದ ಕೆಲವರು ಬಹಳ ಕಾಲ ಪಕ್ಷದಲ್ಲಿ ಇರಲ್ಲ : ಸಚಿವ ಈಶ್ವರಪ್ಪ


ಬೆಳಗಾವಿ : ಕೆಲವರು ಬಿಜೆಪಿಗೆ ಬಂದು ಉದ್ಯಮ ಮಾಡುತ್ತಿದ್ದಾರೆ. ಅಂತವರು ಬಹಳ ಕಾಲ ಪಕ್ಷದಲ್ಲಿ ಇರಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಗುರುವಾರ ಸುವರ್ಣಸೌದಲ್ಲಿ ಮಾತನಾಡಿದ ಅವರು, ಕೆಲವರು ಹೊರಗಿನಿಂದ ಬಂದು ಇನ್ನೂ ಪಕ್ಷಕ್ಕೆ ಹೊಂದಾಣಿಕೆ ಆಗಿಲ್ಲ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯತ್ನಿಸಿದ್ದಾರೆ. ಈ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಬಿಜೆಪಿಗೆ ಬಂದ ಮೇಲೆ ಉದ್ಯಮ ಮಾಡುತ್ತಿದ್ದಾರೆ. ಹೊಂದಾಣಿಕೆ ಆಗದಿದ್ದರೆ ಪಕ್ಷದಿಂದ ಹಿಂದೆ ಸರಿಯುತ್ತಾರೆ. ಬಿಜೆಪಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಕ್ಷವಾಗಿದೆ. ಬಹಳಷ್ಟು ಜನರು ಬರುತ್ತಾರೆ ಎಂದರು.


Leave a Reply