Belagavi

ಸಿ.ಟಿ. ರವಿ, ನೀನೊಬ್ಬ ಲೂಟಿ ರವಿ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ


ಬೆಳಗಾವಿ :ಭ್ರಷ್ಟಾಚಾರ ಜನಕ ಕಾಂಗ್ರೆಸ್​ ಎಂಬ ಸಿ.ಟಿ. ರವಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಸಿ.ಟಿ. ರವಿ ಒಬ್ಬ ಲೂಟಿ ರವಿ ಎಂದು ಕಿಡಿಕಾರಿದ್ದಾರೆ. ನೀನು ಏನು ನನ್ನ ವಿರುದ್ಧ ಆರೋಪ ಮಾಡೋದು ಅಂತಾ ಪ್ರಶ್ನೆ ಮಾಡಿದರು.

ಈ ಲೂಟಿ ರವಿ ನನ್ನ ವಿರುದ್ಧ ಮಾತನಾಡಿ ದೊಡ್ಡ ಲೀಡರ್​ ಆಗಬೇಕು ಎಂದುಕೊಂಡಿದ್ದಾರೆ. ಈ ಸಿ.ಟಿ. ರವಿ ಲೂಟಿ ರವಿ ಹೇಗಿದ್ದ ಅನ್ನೋದನ್ನು ಮೊದಲು ಹೇಳಲಿ ಎಂದು ಗುಡುಗಿದರು.

ಚಳಿಗಾಲ ಅಧಿವೇಶನಕ್ಕೂ ಮುನ್ನ ಬೆಳಗಾವಿಯ ಸುವರ್ಣ ಸೌಧದ ಎದುರು ಕಾಂಗ್ರೆಸ್​ ಹೈಡ್ರಾಮಾವನ್ನೇ ನಡೆಸಿದೆ. ಪರ್ಸೆಂಟೇಜ್​ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್​ ನಾಯಕರು ಟ್ರ್ಯಾಕ್ಟರ್​ ರ್ಯಾಲಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.


Leave a Reply