Belagavi

ರಾಜ್ಯದ ವ್ಯವಸ್ಥೆ ಸುಧಾರಣೆಗೆ ಕೇಂದ್ರದಿAದ ೮೨೯೮ ಕೋಟಿ ರೂ.ನೆರವು: ಸಚಿವ ವಿ.ಸುನೀಲಕುಮಾರ್


ಬೆಳಗಾವಿ ಸುವರ್ಣಸೌಧ : ಡಿ.೧೬: ರಾಜ್ಯದ ವಿದ್ಯಚ್ಛಕ್ತಿ ಪೂರೈಕೆಯ ಸುಧಾರಣೆ ಕ್ರಮಗಳಿಗೆ ಭಾರತ ಸರ್ಕಾರವು ಆರ್‌ಡಿಎಸ್‌ಎಸ್ ಯೋಜನೆಯಡಿ ೮೨೯೮ ಕೋಟಿ ರೂ.ಗಳನ್ನು ಮಂಜೂರು ಮಾಡಲು ಕೇಂದ್ರವು ತಾತ್ವಿಕ ಒಪ್ಪಿಗೆ ನೀಡಿದೆ.ಈ ಅನುದಾನದ ಮೂಲಕ ಉತ್ತರ ಕರ್ನಾಟಕ ಭಾಗದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆ ಎಂದು ಇಂಧನ ,ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲಕುಮಾರ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಚಿಂಚೋಳಿ ಶಾಸಕ ಡಾ.ಅವಿನಾಶ ಉಮೇಶ್ ಜಾಧವ್ ಅವರ ಪ್ರಶ್ನೆಗೆ ಉತ್ತರ ಒದಗಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಆರ್ ಡಿ ಎಸ್ ಎಸ್ ಯೋಜನೆಯಡಿ ೮೨೯೮ ಕೋಟಿ ರೂ.ಮಂಜೂರಾತಿಗೆ ತಾತ್ವಿಕ ಒಪ್ಪಿಗೆ ನೀಡಿದೆ.ಈ ಅನುದಾನದ ನೆರವಿನಿಂದ ರಾಜ್ಯದ ಉತ್ತರ ಭಾಗದ ಕಲ್ಯಾಣ ಕರ್ನಾಟಕ,ಕಿತ್ತೂರು ಕರ್ನಾಟಕ ಸೇರಿದಂತೆ ಇತರ ಎಲ್ಲ ಭಾಗಗಳ ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಸಹಾಯವಾಗಲಿದೆ.ಈ ಕುರಿತು ನಾಳೆ ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.೩೬೯೯ ಕೋಟಿ ರೂ.ಗಳ ಕಾಮಗಾರಿಗಳಿಗೆ ಬರುವ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಚಿAಚೋಳಿ ವಿಧಾನಸಭಾ ಕ್ಷೇತ್ರz ಕೊಳ್ಳುರು ಕ್ರಾಸ್ ಬಳಿ ೧೧೦ ಕೆ.ವಿ.ವಿದ್ಯುತ್ ಉಪಕೇಂದ್ರದ ಸ್ಥಾಪನೆಯ ಪ್ರಸ್ತಾವವು ಕರ್ನಾಟಕ ವಿದ್ಯಚ್ಛಕ್ತಿ ಪ್ರಸರಣ ನಿಗಮ ನಿಯಮಿತದ ೮೪ ನೇ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಅನುಮೋದನೆಗೊಂಡಿದೆ.ಪ್ರಸರಣ ಮಾರ್ಗ ನಿರ್ಮಾಣದ ಸರ್ವೆ ಕಾರ್ಯ ಪೂರ್ಣಗೊಂಡಿದೆ.ಅAದಾಜು ಹಾಗೂ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ.ಆಡಳಿತಾತ್ಮಕ ಅನುಮೋದನೆ ಹಂತದಲ್ಲಿದೆ. ಶಾದಿಪುರ,ಕನಕಪುರ ಹಾಗೂ ಚಂದನಕೇರಾ ಗ್ರಾಮಗಳಲ್ಲಿ ೩೩ ಕೆ.ವಿ.ವಿದ್ಯುತ್ ಉಪಕೇಂದ್ರಗಳನ್ನು ಆರ್‌ಡಿಎಸ್‌ಎಸ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.
ಹೊಲಗಳಲ್ಲಿ ರಾತ್ರಿ ಸಿಂಗಲ್ ಫೇಸ್ ವಿದ್ಯುತ್:ಗ್ರಾಮೀಣ ಭಾಗಗಳ ರೈತರು ರಾತ್ರಿ ಹೊತ್ತು ಹೊಲಗಳಲ್ಲಿ ವಾಸ್ತವ್ಯ ಮಾಡಲು ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಅಗತ್ಯವಿದೆ.ಆರ್‌ಡಿಎಸ್‌ಎಸ್ ಯೋಜನೆಯಡಿ ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಇಂಧನ ,ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲಕುಮಾರ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಬಿ.ಮತ್ತಿಮುಡ ಅವರ ಪ್ರಶ್ನೆಗೆ ಉತ್ತರ ಒದಗಿಸಿ ಅವರು ಮಾತನಾಡಿದರು.
ಕಲಬುರಗಿಯ ಜೆಸ್ಕಾಂ ಹಾಗೂ ಹುಬ್ಬಳ್ಳಿಯ ಹೆಸ್ಕಾಂ ವ್ಯಾಪ್ತಿಯ ಸಮಸ್ಯೆಗಳೂ ಸೇರಿದಂತೆ ರಾಜ್ಯದ ವಿದ್ಯುತ್ ವ್ಯವರ್ಸತೆಯ ಆಧುನೀಕರಣ,ಮಾರ್ಗ ಬದಲಾವಣೆ ಮತ್ತಿತರ ಕಾಮಗಾರಿಗಳನ್ನು ೨೩೦೦ ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುವುದು.ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ತಾವರಗೆರ ಹಾಗೂ ಆಜಾದಪೂರದಲ್ಲಿ ೧೧೦ ಕೆ.ವಿ.ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಜಮೀನು ಪಡೆಯಲಾಗಿದೆ.ಪ್ರಸರಣ ಮಾರ್ಗ ನಿರ್ಮಾಣದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ನರೋಣಾ ಗ್ರಾಮದಲ್ಲಿ ೩೩ ಕೆ.ವಿ.ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ಸಚಿವರು ವಿವರಿಸಿದರು.


Leave a Reply