Belagavi

ಕನ್ನಡ ಬಾವುಟಕ್ಕೆ ಅವಮಾನ; ಖಂಡನಾ ನಿರ್ಣಯ


ಬೆಳಗಾವಿ ಸುವರ್ಣಸೌಧ,ಡಿ.೧೬. ಮಹಾರಾಷ್ಟçದ ಕೊಲ್ಹಾಪುರದಲ್ಲಿ ಕನ್ನಡ ಬಾವುಟ ಸುಟ್ಟು ಅವಮಾನ ಮಾಡಿರುವುದು ಅತ್ಯಂತ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟç ಹಾಗೂ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುವ ನಿರ್ಣಯನ್ನು ವಿಧಾನ ಸಭೆಯಲ್ಲಿಂದು ಕೈಗೊಳ್ಳಲಾಯಿತು.
ಶೂನ್ಯ ವೇಳೆಯಲ್ಲಿ ಶಾಸಕರಾದ ಅನ್ನದಾನಿ, ಮಹಾರಾಷ್ಟçದ ಕೊಲ್ಹಾಪುರದಲ್ಲಿ ಪುಂಡರು ಕನ್ನಡ ಬಾವುಟ ಸುಟ್ಟು ಹಾಕಿರುವುದನ್ನು ಖಂಡಿಸಿ ಖಂಡನಾ ನಿರ್ಣಯ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವರಾದ ಆರ್. ಅಶೋಕ ಇದೊಂದು ಗಂಭೀರ ವಿಚಾರವಾಗಿದೆ. ಮಹಾರಾಷ್ಟç ನೆಲದಲ್ಲಿ ಕನ್ನಡ ಬಾವುಟ ಸುಟ್ಟಿರುವುದು ಕನ್ನಡಿಗರಿಗೆ ನೋವು ತಂದಿದೆ. ನೆಲ, ಜಲ, ಭಾಷೆಯ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಸದಾ ಬದ್ಧವಾಗಿದ್ದು, ಈ ಘಟನೆಗೆ ಕಾರಣವಾದ ಪುಂಡರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ನಿರ್ಣಯ ಕೈಗೊಳ್ಳುವ ಜೊತೆಗೆ ಮಹಾರಾಷ್ಟç ಸರ್ಕಾರದ ಜೊತೆಗೆ ಚರ್ಚಿಸಲಾಗುವುದು ಎಂದರು.
ಇAತಹ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದು, ಎರಡು ಭಾಷಿಕರ ನಡುವೆ ಸೌಹಾರ್ದ ವಾತಾವರಣ ಕದಡುವ ಪ್ರಯತ್ನ ಸಹಿಸುವುದಿಲ್ಲ ಎಂದು ಸಚಿವರು ಹೇಳಿದರು.
ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ ಮತ್ತಿತರರು ಸಹ ಖಂಡನಾ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.


Leave a Reply