Belagavi

ಅತ್ಯಾಚಾರ ಅನಿವಾರ್ಯವಾದಾಗ ಆನಂದಿಸಿ: ರಮೇಶ್ ಕುಮಾರ್


ಬೆಳಗಾವಿ : ರಾಜ್ಯ ವಿಧಾನಸಭೆಯಿಂದ ಆಘಾತಕಾರಿ ಮತ್ತು ಅಸಂಸದೀಯ ಘಟನೆಯೊಂದು ನಡೆದಿದೆ. ವಿಧಾನಸಭೆಯ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಗುರುವಾರ ಅಧಿವೇಶನದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂಬ ಮಾತಿದೆ. ಅದು ನಿಖರವಾಗಿ ನೀವು ಇರುವ ಸ್ಥಾನ, ಎಂದು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ ಕೆಆರ್ ರಮೇಶ್ ಕುಮಾರ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ರೈತರ ಸಮಸ್ಯೆಗಳ ಕುರಿತು ಚರ್ಚೆಗೆ ಶಾಸಕರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಸಮಯ ಕೋರಿದ ಸಂದರ್ಭದಲ್ಲೇ ಈ ಹೇಳಿಕೆ ನೀಡಲಾಗಿದೆ. ಎಲ್ಲರಿಗೂ ಸಮಯ ನೀಡಿದರೆ ಅಧಿವೇಶನ ಹೇಗೆ ನಡೆಸುವುದು ಎಂದು ಸ್ಪೀಕರ್‌ ಕೇಳಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ನೀವು ಏನು ನಿರ್ಧರಿಸಿದರೂ ನಾನು ಹೌದು ಎಂದು ಹೇಳುತ್ತೇನೆ. ನಾನು ಆಲೋಚಿಸುತ್ತಿರುವುದು ನಾವು ಪರಿಸ್ಥಿತಿಯನ್ನು ಆನಂದಿಸೋಣ. ನಾನು ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಸ್ಪೀಕರ್ ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಸಭಾಧ್ಯಕ್ಷರು ಸೇರಿದಂತೆ ಇತರೆ ಸದಸ್ಯರು ನಗಾಡಿದ್ದಾರೆ.


Leave a Reply