Belagavi

ಶೀಘ್ರವೇ ರಾಜ್ಯದಲ್ಲಿ 2 ಸಾವಿರ ಭೂ ಮಾಪಕರ ನೇಮಕ : ಸಚಿವ ಆರ್. ಅಶೋಕ್


ಬೆಳಗಾವಿ : ಶೀಘ್ರವೇ ರಾಜ್ಯದಲ್ಲಿ ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರ ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 841 ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲು ಶೀಘ್ರವೇ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಇಲಾಖೆಯಲ್ಲಿ 3,500ಭೂಮಾಪಕರಿದ್ದಾರೆ. ಹೊಸದಾಗಿ ನೇಮಿಸಿಕೊಳ್ಳುವ ಭೂಮಾಪಕರು ಸೇರಿದಂತೆ ಎಲ್ಲರನ್ನು ಬಳಸಿಕೊಂಡು ನಾಲ್ಕೈದು ತಿಂಗಳಲ್ಲಿ ಬಾಕಿ ಇರುವ ಭೂ ಸರ್ವೆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ


Leave a Reply