Belagavi

ಕನ್ನಡ ಬಾವುಟಕ್ಕೆ ಅವಮಾನ ಬೆಳಗಾವಿ ಜಿಲ್ಲಾ ಕಸಾಪ ಖಂಡನೆ


ಬೆಳಗಾವಿ-೧೭:ಮಹಾರಾಷ್ಟçದಲ್ಲಿ ಎಂ.ಇ.ಎಸ್ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಅವಮಾನಿಸಿ ಅದನ್ನು ಸುಟ್ಟು ಹಾಕಿರುವುದನ್ನು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ.
ಬೆಳಗಾವಿಯೂ ಐತಿಹಾಸಿಕ ಕಾಲದಿಂದಲೂ, ವರ್ತಮಾನದಲ್ಲಿಯೂ ಹಾಗೂ ಭವಿಷತ್‌ದಲ್ಲಿಯೂ ಕನ್ನಡಿಗರದೇ, ಇದರಲ್ಲಿ ಯಾವುದೇ ಸಂಶಯಬೇಡ. ಹಾಗೆ ನೋಡಿದರೆ ಇಂದಿನ ಮಹಾರಾಷ್ಟçವು ಹಿಂದೊಮ್ಮೆ ಕನ್ನಡ ನೆಲವಾಗಿತ್ತು. ಮಹಾರಾಷ್ಟç ಹಾಗೂ ಮರಾಠಿ ಭಾಷೆ ಉದ್ಭವವಾಗಿದ್ದೆ ಕನ್ನಡ ನೆಲದಿಂದ. ಬೆಳಗಾವಿಯಲ್ಲಿ ಕನ್ನಡ ಭಾಷಿಕರು ಹಾಗೂ ಮರಾಠಿ ಭಾಷಿಕರು ಬಾಂಧವ್ಯದಿAದ ಬದುಕುತ್ತಿದ್ದಾರೆ. ಕನ್ನಡ ನಾಡು ನುಡಿಗೆ, ಕನ್ನಡ ಬಾವುಟಕ್ಕೆ ಕೊಲ್ಲಾಪೂರದಲ್ಲಿ ಕೆಲವಂದಿಷ್ಟು ಕಿಡಗೇಡಿಗಳು ಪದೇ ಪದೇ ಅವಮಾನ ಮಾಡುವುದು ಸರಿಯಲ್ಲ. ಇಂತಹ ದ್ರೋಹಿಗಳು ಕನ್ನಡಕ್ಕೆ ಅವಮಾನಿಸುತ್ತಿರುವುದನ್ನು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸಿ, ಅಂತಹ ಕಿಡಗೇಡಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಶ್ರೀಮತಿ ಮಂಗಲಾ ಮೆಟಗುಡ್ಡ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಹಾಗೂ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ತಿಳಿಸಿದ್ದಾರೆ.


Leave a Reply