Belagavi

ಪ್ರೀಯಕರನ ಮನೆ ಮುಂದೆ ಪ್ರೇಯಸಿಯ ಪ್ರತಿಭಟನೆ


ಮದುವೆಯಾದ ಗಂಡ ಡಿವೊರ್ಸ ಕೊಟ್ಟ,ಪ್ರಿಯಕರ ಕೈ ಕೊಟ್ಟ…

ಗೋಕಾಕ: ಮದುವೆ ಆಗುತ್ತೆನೆಂದು ಹೇಳಿ ಮೊಸ ಮಾಡಿದ ಪ್ರಿಯಕರನ ಮನೆ ಮುಂದೆ ಎರಡು ದಿನಗಳಿಂದ ದರಣಿ ಮಾಡುತ್ತಿರುವ ಘಟನೆ ಗೋಕಾಕ ತಾಲೂಕಿನ ಅರಬಾಂವಿಯಲ್ಲಿ ನಡೆದಿದೆ

ಹೌದು ಸುಮಾರು ನಾಲ್ಕು ವರ್ಷಗಳ ಹಿಂದೆ ಮದುವೆಯಾದ ಯುವತಿ ಗೀತಾಳ ಜೊತೆ ಅರಬಾವಿಯ ಮೌನೇಶ ಬಡಿಗೇರ ಎಂಬಾತ ಪರಿಚಯವಾಗಿದ್ದ,

ನಂತರ ಕೆಲವು ದಿನಗಳ ಕಾಲ ಗೀತಾಳಿಗೆ ಪೋನಿನಲ್ಲಿ ಕಳಿಸಿದ ಮೆಸೆಜ್ ನೋಡಿ ಮೊದಲೆ ಮದುವೆಯಾಗಿದ್ದ ಪತಿ ಇವಳಿಗೆ ಡಿವೊರ್ಸ ನಿಡಿದ ನಂತರ ಮೂರು ತಿಂಗಳ ಹಿಂದೆ ಅರಬಾವಿಯ ಮೌನೇಶ ಬಡಿಗೇರ ಇತ ಬೈಲಹೊಂಗಲದ ಸೊಗಲಿನಲ್ಲಿ ಗೀತಾಳನ್ನು ಮದುವೆಯಾಗಿದ್ದ

ಮನೆಯಲ್ಲಿದ್ದ ಮೌನೇಶ ಬಡಿಗೇರನ ಪತ್ನಿಗೆ ತಿಳಿದು ಹಿರಿಯರ ಸಮಕ್ಷಮದಲ್ಲಿ ನ್ಯಾಯ ಕೂಡಿದಾಗ ಮೌನೇಶ ಇತ ಗೀತಾಳನ್ನು ಮದುವೆಯಾಗಲು ಒಪ್ಪಿಕೊಂಡಿದ್ದನು,

ಆದರೆ ಕೆಲವು ದಿನಗಳ ನಂತರ ಮದುವೆ ಬಗ್ಗೆ ವಿಚಾರಿಸಲು ಮನೆಗೆ ಹೋದಾಗ ಅಲ್ಲಿಂದ ಮೌನೇಶ ಇತ ತನ್ನ ಮನೆ ಬಾಗಿಲು ಬಂದ್ ಮಾಡಿ ಪರಾರಿಯಾಗಿದ್ದಾನೆ.
ಇತ್ತ ಎರಡು ದಿನಗಳಿಂದ ತನ್ನ ಪ್ರಿಯಕರ ಮನೆ ಮುಂದೆ ದರಣಿ ಕುಳಿತ ಗೀತಾಳಿಗೆ ಮೌನೇಶನ ತಾಯಿ ಹಾಗು ಅವರ ಸಂಬಂದಿಕರು ಸೇರಿ ಜೀವ ಬೇದರಿಕೆ ಹಾಕುತಿದ್ದಾರೆಂದು ಗೀತಾ ಆರೋಪಿಸಿದ್ದಾಳೆ,

ಅದಲ್ಲದೆ ಇತ್ತ ಪ್ರಿಯಕರನು ಇಲ್ಲ, ಸಂಬಂದಿಕರಿಂದಲೂ ಜೀವ ಬೇದರಿಕೆ ಇರುವಾಗ ಇನ್ನೇನು ಪೋಲಿಸರಿಗೆ ತಿಳಿಸೋಣವೆಂದರೆ ಅವರು ಕೂಡ ಗೀತಾಳಿಗೆ ನ್ಯಾಯ ಕೊಡಿಸುವ ಬದಲು ಅವಳಿಗೆ ಈ ಮನೆ ಮುಂದೆ ಕುಳಿತುಕೊಳ್ಳಬೇಡವೆಂದು ದಮಕಿ ಹಾಕುತಿದ್ದಾರೆಂದು ಹೇಳುತಿದ್ದಾಳೆ,

ಅಷ್ಟೆ ಅಲ್ಲದೆ ಎಲ್ಲಿಯವರೆಗೆ ತನ್ನ ಪ್ರಿಯಕರ ಬರೋದಿಲ್ಲವೋ ಅಲ್ಲಿಯ ತನಕ ನಾನು ಈ ಮನೆ ಬಿಟ್ಟು ಹೊಗೊದಿಲ್ಲ ನಾನು ಸತ್ತರು ಸಹ ಈ ಮನೆಯ ಮುಂದೆ ಅಂತಾ ಹೇಳುತಿದ್ದಾಳೆ,
ಇನ್ನು ಇವಳ ಪರಿಸ್ಥಿತಿ ನೋಡಲಾಗದ ಕೆಲವರು ಮೌನೇಶ ಕುಟುಂಬಕ್ಕೆ ಹೇದರಿ ಗುಪ್ತವಾಗಿ ಕುಡಿಯಲಿಕ್ಕೆ ನೀರು ತಿನ್ನಲಿಕ್ಕೆ ಆಹಾರ ನೀಡಿದ್ದಾರೆ,

ಒಟ್ಟಾರೆಯಾಗಿ ಹೇಳಬೇಕಾದರೆ ಇತ್ತ ಮದುವೆಯಾದ ಗಂಡನೂ ಹೋದ , ಪ್ರಿಯಕರ ಮೌನೇಶ ಕೂಡ ನಾಪತ್ತೆ ಇನ್ನೊಂದು ಕಡೆ ಪೋಲಿಸರ ಬೇದರಿಕೆ ಇರುವಾಗ ಗೀತಾಳ ಗತಿ ಎನಾಗಬಹುದು ಎಂದು ಕಾದು ನೋಡಬೇಕಾಗಿದೆ


Leave a Reply