Koppal

ಮುದೇನೂರು ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ


ಕುಷ್ಟಗಿ:ತಾಲೂಕ ಆಡಳಿತ ತಾಲೂಕ ಪಂಚಾಯತ್ ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕುಷ್ಟಗಿ ಇವರ ಸಹಯೋಗದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಧಿನಿಯಮ 1989 ರಡಿ ಹಾಗೂ ತಿದ್ದುಪಡಿ ಅಧಿನಿಯಮ 2015
ಮತ್ತು ತಿದ್ದುಪಡಿ ನಿಯಮಗಳು 2016 ರ ಪ್ರಕಾರ ಅಸ್ಪೃಶ್ಯತಾ ನಿವಾರಣಾ ಕುರಿತು ಜಾಗೃತಿ ಕಾರ್ಯಕ್ರಮ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆಯಿತು.

ಈ ಕಾರ್ಯಕ್ರಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹಾಗೂ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕುಷ್ಟಗಿ ತಾಲ್ಲೂಕಿನ ವೃತ್ತ ನೀರಿಕ್ಷಕರಾದ ನಿಂಗಪ್ಪ ಎನ್ ಆರ್ ಅಸ್ಪೃಶ್ಯತಾ ನಿವಾರಣಾ ಕುರಿತು ಪ್ರತಿಜ್ಞಾ ವಿಧಿ ಭೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಷ್ಟಗಿ ತಾಲೂಕಿನ ದಂಡಾಧಿಕಾರಿಗಳಾದ ಎಮ್ .ಸಿದ್ದೇಶ ಅಸ್ಪೃಶ್ಯತೆಯ ಭಾವನೆ ಯಾರಲ್ಲಿಯೂ ಇರಬಾರದು.ನಾವೆಲ್ಲರೂ ಒಂದಾಗಿ ಜೀವನ ಸಾಗಿಸಬೇಕು.ಯಾವುದೇ ಭೇಧ ಭಾವ ಮಾಡಬಾರದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಲುಕಾ ಕಾರ್ಯನಿರ್ವಹಕ ಅಧಿಕಾರಿ ಜಯರಾಮ್ ಚವಾಣ್ ಮತ್ತು ತಾವರಗೇರಾ ಪೋಲಿಸ್ ಠಾಣೆಯ ಪಿ.ಎಸ್.ಆಯ್ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅದ್ಯಕ್ಷರು.ಉಪಾಧ್ಯಕ್ಷರು.ಹಾಗೂ ಸವ೯ ಸದಸ್ಯರು ಹಾಗೂ ಮುದೇನೂರ ಗ್ರಾಮದ ಜನರು ಭಾಗವಹಿಸಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply