Belagavi

ಫಸಲ್ ಬಿಮಾ ಯೋಜನೆ ಯಶಸ್ವಿ ಅನುಷ್ಠಾನ: ಕೃಷಿ ಸಚಿವ ಪಾಟೀಲ್


ಬೆಳಗಾವಿ ಸುವರ್ಣಸೌಧ,ಡಿ.೧೭: ರಾಜ್ಯದಲ್ಲಿ ೨೦೧೬-೧೭ನೇ ಸಾಲಿನಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಈ ಯೋಜನೆ ಅಡಿ ೨೦೧೮ರಿಂದ ೨೦೨೦-೨೧ರವರೆಗೆ ೫೭೧೧೯೩೮ ರೈತರು ನೋಂದಾಯಿಸಿಕೊAಡಿದ್ದು ೫೦೫.೭೮ ಕೋಟಿ ರೂ. ಪ್ರಿಮಿಯಂ ಮೊತ್ತ ಪಾವತಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಪರಿಷತ್‌ನಲ್ಲಿ ತಿಳಿಸಿದ್ದಾರೆ.
ಸದಸ್ಯ ಮಹಾಂತೇಶ ಕವಟಗಿಮಠ ಅವರ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದ್ದಾರೆ. ೨೪೦೩೭೬೩ ರೈತರ ೩೯೭೭.೦೭ ಕೋಟಿ ರೂ.ಬೆಳೆವಿಮೆ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿರುವ ಅವರು ರೈತರು ಈ ಯೋಜನೆ ಅಡಿ ವಿಮಾ ಹಣ ಪಡೆಯಲು ಯಾವುದೇ ರೀತಿಯ ತೊಂದರೆಗಳಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.


Leave a Reply