Belagavi

ಸದಸ್ಯರಿಗೆ ಸುವರ್ಣಸೌಧಕ್ಕೆ ಪ್ರವೇಶ ನಿರಾಕರಣೆ:ಹಕ್ಕುಚ್ಯುತಿ ಬಾಧ್ಯತಾ ಸಮಿತಿಗೆ ರವಾನೆ


ಬೆಳಗಾವಿ ಸುವರ್ಣಸೌಧ,ಡಿ.೧೭: ವಿಧಾನಮಂಡಲದ ಸದಸ್ಯರು ಟ್ರಾö್ಯಕ್ಟರ್ ಮೂಲಕ ಸುವರ್ಣಸೌಧಕ್ಕೆ ಪ್ರವೇಶಿಸಲು ಗುರುವಾರ ಯತ್ನಿಸಿದ ಸಂದರ್ಭದಲ್ಲಿ ಪ್ರವೇಶದ್ವಾರದ ಬಳಿ ಪೊಲೀಸ್ ಅಧಿಕಾರಿಗಳು ನಿರಾಕರಿಸುವುದಕ್ಕೆ ಸಂಬAಧಿಸಿದAತೆ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ವಿಧಾನಪರಿಷತ್‌ನಲ್ಲಿ ಶುಕ್ರವಾರ ಹಕ್ಕುಚ್ಯುತಿ ಬಾಧ್ಯತಾ ಸಮಿತಿಗೆ ವಹಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಆದೇಶಿಸಿದರು.
ಈ ಅಧಿವೇಶನ ಮುಗಿದ ಮೊದಲ ಸಮಿತಿ ಸಭೆಯಲ್ಲಿಯೇ ಇದನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ವಿಷಯ ಪ್ರಸ್ತಾಪಿಸಿದ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಟ್ರಾö್ಯಕ್ಟರ್ ಮೂಲಕ ಶಾಸಕರು ಒಳಗಡೆ ಬರುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಗೇಟ್ ಲಾಕ್ ಮಾಡಿ ಮೂರು ಗಂಟೆ ಹೊರಗಡೆಯೇ ನಿಲ್ಲಿಸಿದ್ದರು;ಸದನಕ್ಕೆ ಹೋಗುತ್ತೇವೆ ಬಿಡಿ ಎಂದರೂ ಬಿಡಲಿಲ್ಲ; ಈ ಮೂಲಕ ನಮ್ಮ ಹಕ್ಕುಗಳಿಗೆ ಮತ್ತು ಸಭಾಪತಿಗಳು ಹೇಳಿದರೂ ಕೇಳದೇ ಅಗೌರವಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವಿರೋಧಪಕ್ಷದ ಶಾಸಕರು ಒತ್ತಾಯಿಸಿದರು.


Leave a Reply