Belagavi

೨೦೨೩-೨೪ರೊಳಗೆ ರಾಜ್ಯದಲ್ಲಿ ೯೩ ಲಕ್ಷ ಮನೆಗಳಿಗೆ ನಳ ಸಂಪರ್ಕ ಗುರಿ ನಿತ್ಯ ೧೦ ಸಾವಿರ ಮನೆಗಳಿಗೆ ನಳ ಸಂಪರ್ಕ: ಸಚಿವ ಈಶ್ವರಪ್ಪ


ಬೆಳಗಾವಿ ಸುವರ್ಣಸೌಧ,ಡಿ.೧೭ ಜಲಜೀವನ ಮಿಶನ್ ಯೋಜನೆ ಅಡಿ ರಾಜ್ಯದಲ್ಲಿ ೨೦೨೩-೨೪ರೊಳಗೆ ೯೩ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದ್ದು,ನಿತ್ಯವೂ ೧೦ ಸಾವಿರ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗುತ್ತಿದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಸದಸ್ಯ ಎನ್.ರವಿಕುಮಾರ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಜಲಜೀವ ಮಿಶನ್ ಯೋಜನೆ ಅಡಿ ಇದುವರೆಗೆ ೧೭.೪೦ಲಕ್ಷ ಮನೆಗಳಿಗೆ ನಳಸಂಪರ್ಕ ಕಲ್ಪಿಸಲಾಗಿದೆ ಎಂದರು.
ಜಲಜೀವನ್ ಮಿಶನ್ ಯೋಜನೆಯಡಿ ನಳಸಂಪರ್ಕ ಒದಗಿಸಲು ಯಾವುದೇ ಅರ್ಜಿ ಒದಗಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿ ಸಚಿವ ಈಶ್ವರಪ್ಪ ಅವರು ರಾಜ್ಯದಲ್ಲಿ ಈವರೆಗೆ ೪೧.೯೧ಲಕ್ಷ ಮನೆಗಳಿಗೆ ಟ್ಯಾಪ್ ಮೂಲಕ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದರು. ರಾಜ್ಯದಲ್ಲಿ ೨೦೧೯ರವರೆಗೆ ರಾಷ್ಟಿçÃಯ ಗ್ರಾಮೀಣ ಕುಡಿಯುವ ನೀರು ಯೋಜನೆ ಜಾರಿಯಲ್ಲಿತ್ತು;ನಂತರ ಜಲಜೀವನ ಮಿಶನ್ ಯೋಜನೆಯೊಂದಿಗೆ ವಿಲೀನ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಶೇ.೭೦ರಷ್ಟು ಹಳ್ಳಿಗಳಲ್ಲಿ ಫ್ಲೋರೈಡ್ ನೀರು ಮತ್ತು ದೇವದುರ್ಗ ತಾಲೂಕಿನಲ್ಲಿ ಶೇ.೮೦ರಷ್ಟು ಫ್ಲೋರೈಡ್ ಮಿಶ್ರೀತ ನೀರು ಸಿಗುತ್ತಿದೆ;ಈ ನೀರು ಸೇವನೆಯಿಂದ ನಾನಾಕಾಯಿಲೆಗಳಿಗೆ ಗುರಿಯಾಗುತ್ತಿರುವುದನ್ನು ಸದಸ್ಯ ರವಿಕುಮಾರ ಪ್ರಶ್ನಿಸಿದಕ್ಕೆ ಎಲ್ಲೆಲ್ಲಿ ನದಿಗಳು ಹರಿಯುತ್ತವೆಯೋ ಅಲ್ಲಿನ ಮೂಲಗಳನ್ನು ಗುರುತಿಸಿ ಅಲ್ಲಿಂದ ನೀರು ಒದಗಿಸಲಾಗುತ್ತಿದೆ. ಒಳ್ಳೆಯ ನೀರು ಸಿಗದೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.


Leave a Reply