Koppal

ಅವಳಿ ಜಿಲ್ಲೆಯ ಅಭಿವೃದ್ಧಿ ಯೇ ನಮ್ಮ ಮೂಲ ಉದ್ದೇಶ – ಶರಣಗೌಡ ಬಯ್ಯಾಪೂರ


ಕುಷ್ಟಗಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಳಿಕ ಮೊದಲ ಬಾರಿ ದಿನಾಂಕ 16-2-2021ರಂದು ಕುಷ್ಟಗಿ ಪಟ್ಟಣಕ್ಕೆ ಆಗಮಿಸಿ ಶರಣಗೌಡ ಬಯ್ಯಾಪೂರ ಪತ್ರಿಕಾ ಮಾಧ್ಯಮ ದೇವರೊಂದಿಗೆ ಮಾತನಾಡುತ್ತಾ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನತೆ ಈ ಭಾರಿ ನನಗೆ ಆಶೀರ್ವಾದ ಮಾಡಿದ್ದಾರೆ.ಅವರಿಗೆ ನಾನು ಮೊದಲು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದರ ಜೊತೆ ನಮ್ಮ ತಂದೆ ಹಾಗೂ ಕುಷ್ಟಗಿ ತಾಲೂಕ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ರವರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಆಶೀರ್ವಾದ ಪಡೆಯಲು‌ ಬಂದಿದ್ದೇನೆಂದರು.

ಅವಳಿ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಪತ್ರಕರ್ತರ ಪ್ರಶ್ನೆ ಗೆ ಉತ್ತರಿಸಿದ ಅವರು ಈಗ ಅಧಿಕಾರ ಬಿಜೆಪಿಯವರದ್ದು ಇದೆ .ಹಾಗಾಗಿ ಇನ್ನೂ ಒಂದು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ.ಮುಂದಿನ ದಿನಮಾನಗಳಲ್ಲಿ ಅವಳಿ ಜಿಲ್ಲೆಯ ಅಭಿವೃದ್ಧಿ ಯ ವಿಚಾರಕ್ಕೆ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿ ಏನು ಅಭಿವೃದ್ಧಿ ಪೂರಕ ವ್ಯವಸ್ಥೆ ಬಗ್ಗೆ ಗಮನ ಹರಿಸಿ ಅವಳಿ ಜಿಲ್ಲೆಗಳ ಅಭಿವೃದ್ಧಿ ಗೆ ಶ್ರಮಿಸಲಾಗುವುದು ಎಂದರು.

 

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply